ವಿಜಯ ಸಂಘರ್ಷ
ಭದ್ರಾವತಿ: ಛಲವಾದಿ ಮಹಾಸಭಾ ವತಿಯಿಂದ ಇಂದು 75 ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ನಂತರ ಛಲವಾದಿ ಮಹಾಸಭಾ ನೂತನ ಕಚೇರಿಯನ್ನು ಜಿಲ್ಲಾಧ್ಯಕ್ಷ ಎನ್ ಶ್ರೀನಿವಾಸ್ ಕಚೇರಿ ಉದ್ಘಾಟಿಸಿದರು. ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಯರಾಜ್, ಪ್ರಧಾನ ಕಾರ್ಯದರ್ಶಿ ಯಾದ ಆದಿತ್ಯ ಶಾಮು, ತಿಪ್ಪೇಸ್ವಾಮಿ, ಪುಟ್ಟರಾಜು, ಮಹೇಶ, ಜಯಲಕ್ಷ್ಮಿ, ಚಿತ್ರ ಹೊನ್ನಾವರ, ಭಾಗ್ಯಮ್ಮ, ಜಗದೀಶ, ನಾಗರಾಜು ಲಿಂಗರಾಜು, ಕೃಷ್ಣ, ವರದರಾಜು, ಕೆಂಪರಾಜು ಮುಂತಾದವರು ಉಪಸ್ಥಿತರಿದ್ದರು.
ಎಎಪಿ ವತಿಯಿಂದ
ಭದ್ರಾವತಿ : ಆಮ್ಆದ್ಮಿ ಪಾರ್ಟಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಇಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದಜಿಲ್ಲಾಧ್ಯಕ್ಷ ರವಿಕುಮಾರ್, ಹಿರಿಯ ಮುಖಂಡ ರಾದ ಪರಮೇಶ್ವರಚಾರ್. ಡಿ.ಎಂ.ಚಂದ್ರಪ್ಪ. ಅಬ್ದುಲ್ ಖದೀರ್ ಜಾವೇದ್. ಬಿ.ಕೆ.ರಮೇಶ್. ಇಬ್ರಾಹಿಂ. ರೇಷ್ಮೆ, ಭಾಗ್ಯ, ಮಸ್ತಾನ್. ಸೇರಿದಂತೆ ಹಲವಾರು ಉಪಸ್ಥಿತರಿದರು.
ವಿಇಎಸ್ ವಿದ್ಯಾಸಂಸ್ಥೆಯಲ್ಲಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸ ವದ ವಜ್ರ ಮಹೋತ್ಸವ ಕೊರೊನ ಮಾರ್ಗಸೂಚಿಗಳನ್ನು ಅನುಸರಿಸಿ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಛೇರ್ಮನ್ ಬಿ. ಎಲ್. ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ವಿದ್ಯಾ ಸಂಸ್ಥೆಯ ಪದನಿಮಿತ್ತ ಅಧ್ಯಕ್ಷ ಸಿದ್ದಬಸ್ಸಪ್ಪ ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶವನ್ನು ಕಟ್ಟಿ ಕೊಟ್ಟರು.
ಈ ಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬಿ. ಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳು ವರ್ಣರಂಜಿತ ಪಥಸಂಚಲನದ ಮೂಲಕ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರಾರ್ಥಿಸಿದರೆ, ಕವಿತಾ ರೇವತಿ ಸ್ವಾಗತಿಸಿ, ರೇಣುಕಪ್ಪ ಕಾರ್ಯಕ್ರಮ ನಿರೂಪಿಸಿದರು, ಭವಾನಿ ಬಾಯಿ ವಂದಿಸಿದರು. ಸಮೀನಾ ಯಾಸ್ಮಿನ್, ಶಶಿಕಲಾ ಇದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795