ವಿಜಯ ಸಂಘರ್ಷ
ಬೆಂಗಳೂರು: ಕರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪರಿಣಾಮಕಾರಿ. ಮೂರನೇ ಅಲೆಯು ಹೆಚ್ಚಿನ ಹಾನಿ ಮಾಡದೇ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲಸಿಕೆ ಕಾರ್ಯಕ್ರಮ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು.
ಇಂದು ಜೆಪಿನಗರದ ಪುಟ್ಟೇನಹಳ್ಳಿ ಪೋಲೀಸ್ ಠಾಣೆಯ ಬಳೀ ಇರುವ ಸತ್ಯಸಾಯಿಗಣಪತಿ ದೇವಸ್ಥಾನದ ಆಟದ ಮೈದಾನದ ಬಳಿ ಆರೋಗ್ಯ ದೀಪ ಸ್ವಾಸ್ಥ್ಯಸಮಿತಿ, ಸ್ವಾತಿ ಮಹಿಳಾ ಸಂಘ ಹಾಗೂ ಸ್ಥಳೀಯ ಮುಖಂಡರ ಸಹಯೋಗದೊಂದಿಗೆ ಉಚಿತ ಕೋವಿಡ್ ಲಸಿಕೆಯನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂರನೇ ಅಲೆಯನ್ನು ಎದುರಿಸಲು ಈಗನಿಂದಲೇ ತಯಾರಿ ಮಾಡಿಕೊಳ್ಳ ಲಾಗುತ್ತಿದೆ.ಕರೋನಾ ಸೋಂಕು ಎಲ್ಲರನ್ನೂ ಒಂದಿಲ್ಲ ಒಂದು ರೀತಿಯಲ್ಲಿ ತೊಂದರೆಗೀಡು ಮಾಡಿತು. ಈ ಮಹಾಮಾರಿಯ ಮೂರನೇ ಅಲೆಯನ್ನು ತಡೆಯಲು ಲಸಿಕಾ ಕಾರ್ಯಕ್ರಮ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತಹ ಹಲವಾರು ಪ್ರದೇಶಗಳಲ್ಲಿ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರ ಉಪಯೋಗ ಪಡೆದು ಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಮುಂಜಾಗ್ರತೆಯಾಗಿ ಕ್ರೋಢೀಕರಿಸುವ ನಿಟ್ಟಿನಲ್ಲೂ ನಾವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ರಾಮ್ ಮೋಹನ್ ರಾಜ್, ಮಾಜಿ ಕಾರ್ಪೋರೇಟರ್ ಶೋಭಾ ಮುನಿರಾಮ್, ಪ್ರಭಾವತಿ ರಮೇಶ್ ಹಾಗೂ ಸ್ಥಳೀಯ ಮುಖಂಡರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795