ರಾಜ್ಯದ ನೂತನ ಸಚಿವರಿಗೆ ಎಂಎಸ್ಎಂಇ ಅಧ್ಯಕ್ಷ ರಿಂದ ಅಭಿನಂದನೆ

 ವಿಜಯ ಸಂಘರ್ಷ



ಭದ್ರಾವತಿ: ಕೇಂದ್ರ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ  ಸಂಸದರನ್ನು ಮೈಕ್ರೋ ಸ್ಮಾಲ್ & ಮೀಡಿಯಾ ಎಂಟರ್‌ಪ್ರೈಸಸ್ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಸನ್ಮಾನಿಸಿ ಅಭಿನಂದಿಸಿದರು.



     ಕೌನ್ಸಿಲ್ ಕೇಂದ್ರ ಘಟಕದ ನಿರ್ದೇಶಕ ಎಚ್.ಸಿ ರಮೇಶ್, ರಾಜ್ಯದಲ್ಲಿ ಮೈಕ್ರೋ ಸ್ಮಾಲ್ & ಮೀಡಿಯಾ ಎಂಟರ್‌ ಪ್ರೈಸಸ್ ಬೆಳವಣಿಗೆಗೆ ಕಳೆದ ಸುಮಾರು ಒಂದೂವರೆ ವರ್ಷದಿಂದ ಶ್ರಮಿಸು ತ್ತಿದ್ದು, ನೂತನ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ಹಾಗು ಎ. ನಾರಾಯಣಸ್ವಾಮಿ ರವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸುವ ಜೊತೆಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಜೊತೆಗೆ ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು