ಹೆಬ್ಬೆಟ್ಟಿನ ದೃಢೀಕರಣಕ್ಕೆ ಪಡಿತರ ಅಂಗಡಿಗಳ ಮುಂದೆ ನೂಕು ನುಗ್ಗಲು

 

ವಿಜಯ ಸಂಘರ್ಷ



ಹೊಸನಗರ : ಗ್ರಾಮೀಣ ಭಾಗದ ಗ್ರಾಹಕರು ತಮ್ಮ ಕುಟುಂಬದ ಪಡಿತರ ಚೀಟಿ ನವೀಕರಿಸಲು ಆ: 10 ಕೊನೆ ದಿನ. ಕುಟುಂಬದ ಎಲ್ಲಾ ಸದಸ್ಯರು ನ್ಯಾಯ ಬೆಲೆ ಅಂಗಡಿಗೆ ತೆರಳಿ ಹೆಬ್ಬೆಟ್ಟಿನ ದೃಢೀಕರಣ ನೀಡಬೇಕು. ಹಾಗಾಗಿ, ಪಡಿತರ ಅಂಗಡಿಗಳ ಮುಂದೆ ನೂಕು ನುಗ್ಗಲಾಗಿದೆ.

ಕಳೆದ ಒಂದು ವಾರದಿಂದ ಅಪಾರ ಪ್ರಮಾಣದ ಮಳೆ ಹಾನಿಯಿಂದ ಗ್ರಾಮೀಣ ಭಾಗದಲ್ಲಿಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ ತಲೆದೋರಿದೆ. ಗಣಕಯಂತ್ರದಲ್ಲಿ ಹೆಬ್ಬೆಟ್ಟು ಗುರುತು ಮೂಡದ ಕಾರಣ ಹತ್ತಾರು ಕಿ.ಮೀ ದೂರದಿಂದ ಪ್ರತಿನಿತ್ಯ ನಡೆದು ಬಂದ ನಾಗರಿಕರು ಬಂದ ದಾರಿಗೆ ಸುಂಕ ಇಲ್ಲದೆ ಬರಿಗೈಯಲ್ಲಿ ತೆರಳುತ್ತಿದ್ದಾರೆ.

ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರೆ ಹೆಚ್ಚಾಗಿರುವ ಇಲ್ಲಿ ತಮ್ಮ ನಿತ್ಯದ ಕಾಯಕ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಬೆಳಿಗ್ಗೆ ನಿಂದಲೇ ಸರದಿ ಸಾಲಿನಲ್ಲಿ ಅನ್ನ ನೀರಿಲ್ಲದೆ ಹೆಂಗಸರು, ಮಕ್ಕಳು, ಸೇರಿ ಪಡಿತರ ಅಂಗಡಿ ಬಾಗಿಲು ಕಾಯುತ್ತಿದ್ದರು ಸಹ ಹೆಬ್ಬೆಟ್ಟು ನೀಡಲು ಬಂದರೆ ನೆಟ್‌ವರ್ಕ್‌ ಸಮಸ್ಯೆ

ಅವಧಿ ವಿಸ್ತರಣೆಗೆ ಒತ್ತಾಯ:

ಗ್ರಾಮ ಪಂಚಾಯಿತಿ ಆ.10 ಕಡೆ ದಿನ. ನೆಟ್‌ವರ್ಕ್‌, ಸರ್ವರ್ ಸಮಸ್ಯೆಯ ಕಾರಣ ಜನರಿಗೆ ಸಮಯಕ್ಕೆ ಸರಿಯಾಗಿ ದಾಖಲಾತಿ ನೀಡಲು ಸಾಧ್ಯವಾಗುತ್ತಿಲ್ಲ. ಅವಧಿ ಮುಗಿದರೆ ಕಾರ್ಡ್‌ ರದ್ದಾಗುವ ಭೀತಿಯಲ್ಲಿದ್ದಾರೆ. ಸರ್ಕಾರದ ಲೋಪದೋಷಕ್ಕೆ ಹೊಣೆ ಯಾರು. ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡಬೇಕು ಎನ್ನುತ್ತಾರೆ ರಾಷ್ಟ್ರೀಯ  ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ರೈತ ಘಟಕದ ಅಧ್ಯಕ್ಷ ಕೃಷ್ಣನಾಯ್ಕ.

'ವಿದ್ಯುತ್‌ ಸಮಸ್ಯೆಯೂ ಕಾಡುತ್ತಿದೆ. ಬೆಳಿಗ್ಗೆ 8ರಿಂದ ಸರದಿಯಲ್ಲಿ ನಿಂತಿದ್ದೇನೆ. ಸಂಜೆ 5 ಆದರೂ ನನ್ನ ಸರದಿ ಬಂದಿಲ್ಲ ಎಂದು ರಾಜು ಶೆಟ್ಟಿ ಅಕ್ರೋಶ ವ್ಯಕ್ತಪಡಿಸಿದರು. ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು