ಪರಿಸರ ನಾಶದಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗೆ ಧಕ್ಕೆ: ಬಿ.ಎಲ್ ಚಂದ್ವಾನಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಪರಿಸರ ನಾಶದಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗೆ ಧಕ್ಕೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಮುದಾಯಗಳ ಜೀವನೋಪಾಯ, ಆರೋಗ್ಯ ಮತ್ತು ಯೋಗಕ್ಷೇಮಕ್ಕೂ ಸಂಕಷ್ಟ ಎದುರಾಗುತ್ತದೆ ಎಂದು ವಿಐಎಸ್ ಎಲ್ ಕಾರ್ಖಾನೆ ಕಾರ್ಯ ಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಪರಿಸರ ಮಾಸಾಚರಣೆ ಹಿನ್ನಲೆಯಲ್ಲಿ ಕಾರ್ಖಾನೆ ವತಿಯಿಂದ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳದ್ದ ಕಾರ್ಯಕ್ರಮದಲ್ಲಿ ಪರಸರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪರಿಸರ ನಾಶದಿಂದ ಭೂಮಿಯ ಅವನತಿ, ಮರುಭೂಮಿ ಮತ್ತು ಬರಗಾಲದ ಸಮಸ್ಯೆಗಳು ಉಲ್ಬಣ ಗೊಳ್ಳುವುದರಿಂದ ಸಾಕಷ್ಟು ಸಮಸ್ಯೆ ಗಳು ಎದುರಿಸ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಕುರಿತು ಹೆಚ್ಚಿನ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.

ಮಹಾಪ್ರಬಂಧಕ(ಸುರಕ್ಷತೆ) ಹರಿಶಂಕರ್ ಪರಿಸರ ನೀತಿ ವಾಚಿಸಿದರು. ಮಹಾಪ್ರಬಂಧಕ (ಸಾರ್ವಜನಿಕ ಸಂಪರ್ಕ) ಎಲ್.ಪ್ರವೀಣ್ ಕುಮಾರ್, ಮಹಾಪ್ರಬಂಧಕಿ(ಹಣಕಾಸು ಮತ್ತು ಲೆಕ್ಕ) ಶೋಭಾ ಶಿವಶಂಕರನ್, ಮತ್ತು ಸಹಾಯಕ ಮಹಾಪ್ರಬಂಧಕ (ವಿಜಿಲೆನ್ಸ್) ಎಲ್. ಕುಥಲನಾಥನ್ ಪರಿಸರ ಪ್ರತಿಜ್ಞೆ ಬೋಧಿಸಿದರು.

ಸಹಾಯಕ ಮಹಾಪ್ರಬಂಧಕ (ಹಣಕಾಸು) ಉನ್ನಿಕೃಷ್ಣನ್ ಪ್ರಾರ್ಥಿಸಿ, ಸಹಾಯಕ ಮಹಾಪ್ರಬಂಧಕ(ನೀರು ಸರಬರಾಜು ಮತ್ತು ಪರಿಸರ ನಿರ್ವಹಣೆ) ವಿಕಾಸ ಬಸೇರ್ ಸ್ವಾಗತಿಸಿದರೆ, ಕಿರಿಯ ಪ್ರಬಂಧಕ ನಂದನ ವಂದಿಸಿದರು.

ಪರಿಸರ ಮಾಸಾಚರಣೆ : ವಿವಿಧ ಸ್ಪರ್ಧೆಗಳು:

ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಪರಿಸರ ಮಾಸಾಚರಣೆ ನ.19 ರಿಂದ ಡಿ.18 ರವರೆಗೂ ಹಮ್ಮಿಕೊಳ್ಳ ಲಾಗಿದ್ದು, ಇದರ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶ ದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ.

ಶಾಲಾ ವಿಧ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸ್ಪರ್ಧೆಗಳ ವಿವರ :

5 ನೇ ತರಗತಿಯಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ) ಹಾಗು ೮ನೇ ತರಗತಿಯಿಂದ 10 ನೇ ತರಗತಿ ವಿದ್ಯಾರ್ಥಿ ಗಳಿಗೆ ರಸಪ್ರಶ್ನೆ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ) ನ.23ರಂದು ಮಧ್ಯಾಹ್ನ 3 ಗಂಟೆಗೆ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9480829062 / 9480829202 ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಿದೆ.

ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು