ವಿಜಯ ಸಂಘರ್ಷ ನ್ಯೂಸ್
ತೀರ್ಥಹಳ್ಳಿ : ತುಂಗಾ ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್ ಬಿಟ್ಟು ವ್ಯಕ್ತಿಯೊಬ್ಬರು ನದಿಗೆ ಇಳಿದು ನಂತರ ನಾಪತ್ತೆಯಾಗಿದ್ದ ಬ್ಯಾಂಕ್ ವ್ಯವಸ್ಥಾಪಕನ ಶವ ಬುಧವಾರ ತುಂಗಾ ಕಮಾನು ಸೇತುವೆ ಹತ್ತಿರ ಸ್ಮಶಾನ ಕಟ್ಟೆ ಸಮೀಪ ಪತ್ತೆಯಾಗಿದೆ.
ತಾಲೂಕಿನ ಅರಳಸುರುಳಿಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶ್ರೀವತ್ಸ (38) ವರ್ಷ ಎಂದು ತಿಳಿದು ಬಂದಿದೆ. ಇವರು ಸೋಮವಾರ ಬೆಳಗ್ಗೆ ತುಂಗಾ ನದಿ ನೀರಿಗೆ ಇಳಿದಿದ್ದರು. ನಂತರ ತುಂಗಾ ನದಿಯಲ್ಲಿ ನಾಪತ್ತೆ ಯಾಗಿದ್ದ ಶಂಕೆ ವ್ಯಕ್ತವಾಗಿತ್ತು. ನದಿ ದಡದಲ್ಲಿ ಮೊಬೈಲ್, ಬಟ್ಟೆ, ಚಪ್ಪಲಿ ಆಧಾರದಲ್ಲಿ ಅವರು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಲಾಗಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನ ದಲ್ಲಿ ಪೊಲೀಸರು ಸಿಬ್ಬಂದಿಗಳು ಮತ್ತು ಅಗ್ನಿ ಶಾಮಕ ದಳದವರು ಮಂಗಳವಾರ ಸ್ಥಳದಲ್ಲಿ ತೀವ್ರ ತರದ ಹುಡುಕಾಟ ನಡೆಸಿದ್ದರು. ಆದರೆ ಶವ ಪತ್ತೆ ಯಾಗಿರಲಿಲ್ಲ ಬ್ಯಾಂಕ್ ಮ್ಯಾನೇಜರ್ ಒಬ್ಬರೇ ತೀರ್ಥಹಳ್ಳಿಯಲ್ಲಿ ಇದ್ದರು ಎಂದು ಹೇಳಲಾಗುತ್ತಿದ್ದು ಸಂಬಂಧಿ ಕರು ಆಂಧ್ರಪ್ರದೇಶದ ವಿಶಾಖಪಟ್ಟಣ ದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ತೀರ್ಥಹಳ್ಳಿ ವರದಿ