ಸಾಹಿತ್ಯದ ಸಾಂಗತ್ಯದಿಂದ ಬದುಕು ಉಲ್ಲಾಸ: ಕೋಗಲೂರು ತಿಪ್ಪೇಸ್ವಾಮಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ಮನುಷ್ಯನ ನೆಮ್ಮದಿಗೆ ಸಂಸ್ಕೃತಿ ಮತ್ತು ಸಾಹಿತ್ಯದ ಸಾಂಗತ್ಯ ಮುಖ್ಯ ಎಂದು ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

ಅವರು ಸೊರಬದ ಪ್ರವಾಸಿ ಮಂದಿರ ದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನೇಮಕಾತಿ ಪ್ರಮಾಣ ಪತ್ರ ನೀಡಿ ಮಾತಾನಾಡಿ, ಸರ್ಕಾರಿ ನೌಕರರ ಒತ್ತಡದ ಕೆಲಸ ದ ಮಧ್ಯೆ ಮನರಂಜನೆ ಹಾಗೂ ಉಲ್ಲಾಸ ಭರಿತ ಚಟುವಟಿಕೆ ಗಳ ಅಗತ್ಯ ಇದೆ ಅದಕ್ಕಾಗಿ ಹಾಗೂ ನೌಕರರ ಪ್ರತಿಭೆ ಗುರುತಿಸಲಿಕ್ಕಾಗಿ ಪರಿಷತ್ತು ಅಸ್ತಿತ್ವ ಕ್ಕೆ ಬಂದಿದ್ದು ಜಿಲ್ಲೆಯ ಸಾಗರ, ಶಿಕಾರಿಪುರ ದ ನಂತರ ಇದೀಗ ಸೊರಬ ಘಟಕ ರಚಿಸಿದ್ದು ಎಲ್ಲೆಡೆ ಸಂಸ್ಕೃತಿ ಪಸರಿಸುತ್ತ ಸಾಹಿತ್ಯ ಬೆಳೆಸಲು ಮುಂದಾಗಿದೆ. ಆಸಕ್ತರು ಕೈಜೋಡಿಸಲು ಕರೆ ನೀಡಿದರು.

ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಶಿವಾನಂದ್ ಪಾಣಿ, ಸಂಸ್ಕೃತಿ ಸಾಹಿತ್ಯ ಪರಿಷತ್ತಿನ ರಾಜ್ಯ ಸಹ ಕಾರ್ಯದರ್ಶಿ ಶಿವನಾಯ್ಕ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು