ಭದ್ರಾವತಿ-ವೇಶ್ಯವಾಟಿಕೆ ನಡೆಸುತ್ತಿದ್ದ ಮಹಿಳೆಯರಿಗೆ ಸಜೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮನೆಗಳಲ್ಲೆ ಮಹಿಳೆ ಯರನ್ನ ಇಟ್ಟುಕೊಂಡು ಬಲವಂತದ ವೇಶ್ಯವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿತರಿಗೆ 10 ವರ್ಷ ಕಠಿಣ ಸಜೆ 1.61 ಲಕ್ಷ ತಲಾ ದಂಡ ವಿಧಿಸಿ ಭದ್ರಾವತಿ ನ್ಯಾಯಾಲಯ ತೀರ್ಪು ನೀಡಿದೆ. 

ದಿನಾಂಕ 24-12-2021 ರಂದು ಅಂದಿನ ಡಿವೈಎಸ್ಪಿ ಜಿತೇಂದ್ರ ಕುಮಾರ್ ದಯಾಮ ರವರು ನಗರದ ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗ, 3ನೇ ಕ್ರಾಸ್ ನಲ್ಲಿರುವ ವಾಸದ ಮನೆಯಲ್ಲೇ ವೇಶ್ಯ ವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದ್ದರು. 

ಆರೋಪಿತರಾದ ಚಂದ್ರಕಲಾ ಮತ್ತು ಶಿಲ್ಪಾ ರವರುಗಳು ಹಣ ಸಂಪಾದನೆ ಮಾಡಲು ಕವಿತಾ ಮತ್ತು ಯೊಗೇಶ್ ರವರೊಂದಿಗೆ ಸೇರಿಕೊಂಡು, ಶಿಲ್ಪಾ ರವರ ಮನೆಗೆ ಹೆಣ್ಣು ಮಕ್ಕಳನ್ನು ಕರೆಯಿಸಿಕೊಂಡು ವೇಶ್ಯಾ ವಾಟಿಕೆ ವ್ಯವಹಾರ ಮಾಡುವ ಸಲುವಾಗಿ, ನೊಂದ ಮಹಿಳೆಯರಿಗೆ ನಿಮಗೆ ನಾವು ಹಣವನ್ನು ನೀಡುತ್ತೇವೆ ಎಂದು ಹೇಳಿ, ಈ ವಿಚಾರ ಮನೆಯವರಿಗೆ ಹೇಳಿದರೆ ಟಾರ್ಚರ್ ಮಾಡುವುದಾಗಿ ಹೆದರಿಸಿ, ಮನೆಯ ಒಳಗೆ ಇರಿಸಿಕೊಂಡು, ನಾವು ಹೇಳಿದಂತೆ ಕೇಳಬೇಕು ಎಂದ ಹೇಳಿ ಹಿಂಸೆ ನೀಡಿ, ಕಾನೂನು ಬಾಹಿರವಾಗಿ ವೇಶ್ಯಾ ವಾಟಿಕೆ ನಡೆಸಿ, ಹಣ ಸಂಪಾದನೆ ಮಾಡುತ್ತಿದ್ದರು ಎಂಬ ದೂರಿನ ಅಡಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆಗಿನ ಪೇಪರ್ ಟೌನ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಪಿಐ ಮಂಜುನಾಥ ಇ ಓ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. 

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾದ ರತ್ನಮ್ಮ ಪಿ ವಾದ ಮಂಡಿಸಿದ್ದರು. 

ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆ ಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ನಿನ್ನೆ ಆರೋಪಿತರಾದ ಜೇಡಿಕಟ್ಟೆ, ಹೊಸುರು ವಾಸಿ 1) ಚಂದ್ರಕಲಾ @ ಶ್ವೇತಾ, 31 ವರ್ಷ 2) ಶಿಲ್ಪಾ ಎಸ್, 35 ವರ್ಷ , ಉಜ್ಜನಿಪುರ ಮಾರಿಯಮ್ಮ ದೇವಸ್ಥಾನ ಹಿಂಭಾಗದ ವಾಸಿ ಹೊಸ ಸಿದ್ದಾಪುರ ವಾಸಿ 3) ಕವಿತಾ, 40 ವರ್ಷ, ಇವರಿಗೆ ತಲಾ 10 ವರ್ಷ ಕಠಿಣ ಕಾರಾವಾಸ ಮತ್ತು 1,61,000/- ರೂ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು