ಭದ್ರಾವತಿ-ನಾಳೆಯಿಂದ ಈ ಪ್ರದೇಶಗಳಲ್ಲಿ ಎರಡು ದಿನ ಕರೆಂಟ್ ಇರಲ್ಲ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಮೆಸ್ಕಾಂ 220 KV ವಿದ್ಯುತ್ ಮಾರ್ಗದಲ್ಲಿ ತುರ್ತು ಕೆಲಸ ವಿರುವುದರಿಂದ, ನಗರ ಹಾಗೂ ಗ್ರಾಮೀಣ ವ್ಯಾಪ್ತಿಯ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಆ: 3 & 4 ಈ ಎರಡು ದಿನಗಳಲ್ಲಿ ಬೆಳಗ್ಗೆ 9.00 ರಿಂದ ಸಂಜೆ 6.00ರ ವರೆಗೆ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

ಎಲ್ಲೆಲ್ಲಿ ವ್ಯತ್ಯೆಯ

ಹುಡ್ಕೋಕಾಲೋನಿ, ಜನ್ನಾಪುರ, ಬೊಮ್ಮನಕಟ್ಟೆ, ಹೌಸಿಂಗ್ ಬೋರ್ಡ್, ಸಿದ್ದಾಪುರ, ಎನ್.ಟಿ.ಬಿ. ಲೇಔಟ್, ಹೊಸೂರು ತಾಂಡ, ಹಿರಿಯೂರು, ಅರಳಿಕೊಪ್ಪ, ರಬ್ಬರ್‌ಕಾಡು, ಬಾಳೆಮಾರನ ಹಳ್ಳಿ, ಸುಲ್ತಾನ್‌ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ ಕಾಳನ ಕಟ್ಟೆ, ಕಂಬದಾಳ್‌ ಹೊಸೂರು, ಹೊನ್ನಟ್ಟಿ ಹೊಸೂರು ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಉಂಟಾಗ ಲಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ವಿ), ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು