ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ಧಿ ಗಳು ಕಾರ್ಮಿಕ ಮುಖಂಡರು ಪ್ರಜ್ಞಾವಂತ ಪ್ರಬುದ್ಧ ಹೋರಾಟಗಾರ ಡಿ.ಸಿ. ಮಾಯಣ್ಣ ನವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಸಮಾಜ ಸೇವೆ ಯನ್ನು ಗೌರವಿಸಿ ಪ್ರದ್ಮಶ್ರೀ ಪ್ರಶಸ್ತಿ ಹಾಗೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸ ಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಲಾಯಿತು.
ನಗರಸಭೆಯು ಬೊಮ್ಮಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ G+3 ಗುಂಪು ಮನೆಗಳಿಗೆ ಡಿ.ಸಿ.ಮಾಯಣ್ಣ ಬಡಾವಣೆ ಎಂದು ನಾಮಕರಣ ಮಾಡಲು ಹಾಗೂ ನಗರದ ಮುಖ್ಯರಸ್ತೆ ಮತ್ತು ಮುಖ್ಯ ವೃತ್ತಗಳಿಗೆ ಅವರ ಹೆಸರನ್ನು ನಾಮಕರಣ ಮಾಡಿ, ಕ್ಷೇತ್ರ ದಲ್ಲಿ ಶಾಶ್ವತವಾಗಿ ಸಾರ್ವಜನಿಕರು ಅವರನ್ನು ಗೌರವಿಸಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ರಾಜ್ಯದ ವಿವಿಧ ವಿಶ್ವವಿಧ್ಯಾನಿಲಯ ಗಳು ಡಿ.ಸಿ.ಮಾಯಣ್ಣನವರ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕೆಂದು ಕೋರಿದರು.
93 ವರ್ಷಗಳ ಹಿರಿಯ ಸರಳ ಸಜ್ಜನ ರಾಜಕಾರಣಿಗಳು ವಿ.ಐ.ಎಸ್.ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳ ಮತ್ತು ಕಾರ್ಮಿಕ ಹಾಗೂ ಗುತ್ತಿಗೆ ಕಾರ್ಮಿಕರ ಪರವಾಗಿ ನಿರಂತರ ಹೋರಾಟಗಳನ್ನು ನಡೆಸಿ ಬಿಸಿಯೂಟ ಕಾರ್ಮಿಕರ, ಬೀದಿ ವ್ಯಾಪಾರಿಗಳ, ಅಸಂಘಟಿತ ಕೂಲಿ ಕಾರ್ಮಿಕರ ಪರವಾಗಿ ಕಳೆದ 60 ವರ್ಷಗಳಿಂದಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ಹೋರಾಟಗಳನ್ನು ನಡೆಸಿ ಕ್ಷೇತ್ರಕ್ಕೆ ಹಿರಿಯಣ್ಣನಾಗಿ ಸಲ್ಲಿಸಿರುವ ಸೇವೆ ದೇಶ ಮತ್ತು ರಾಜ್ಯ ಮರೆಯುವಂತ ದ್ದಲ್ಲ. ಈ ಬಗ್ಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇವರನ್ನು ಗೌರವಿಸ ಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಮಾಯಣ್ಣನವರು ತಮ್ಮ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ ಕಾಮ್ರೇಡ್ ಅನಂತಸುಬ್ಬರಾವ್ ರವರು ತಮ್ಮ ದೇಹ ವನ್ನು ದಾನಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಹೀಗೆ ಮುಂದಿನ ಪೀಳಿಗೆಗೆ ದಾರಿದೀಪ ವಾಗಿರುವ ರಾಜ್ಯದ ಹಿರಿಯ ಹೋರಾಟಗಾರರಾದ ಕಾಮ್ರೇಡ್ ಹೆಚ್.ವಿ.ಅನಂತ ಸುಬ್ಬರಾವ್, ಕಾಮ್ರೇಡ್ ಡಿ.ಸಿ.ಮಾಯಣ್ಣ, ಕಾಮ್ರೇಡ್ ಕಾಳೇಗೌಡ, ಕಾಮ್ರೇಡ್ ಎಸ್.ಆಂಜನೇಯ,ಕಾರ್ಮಿಕ ಮುಖಂಡರು ಹಾಗೂ ನಗರಸಭೆ ಮಾಜಿ ಸದಸ್ಯರಾದ ಭೈರಪ್ಪ ಗೌಡರು ಇವರೆಲ್ಲರು ಈಚೆಗೆ ನಿಧನರಾಗಿದ್ದು, ಕಾರ್ಮಿಕರ ಪರವಾಗಿ ತಮ್ಮ ಜೀವನ ಪರ್ಯಂತ ಪ್ರಾಮಾಣಿಕ ಹೋರಾಟ ನಡೆಸಿದ ಇವರು ಗಳನ್ನು ಗೌರವಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಿಂದಿನ ಮುಖ್ಯ ಮಂತ್ರಿಗಳಾದ ಎಸ್ ಬಂಗಾರಪ್ಪರವರಿಗೆ ಕರ್ನಾಟಕ ರತ್ನ ಎಂಬ ಪ್ರಶಸ್ತಿಯನ್ನು ನೀಡಿದರೆ ಕಾರ್ಮಿಕ ನಾಯಕರನ್ನು ಗೌರವಿಸಲು ಕಾರ್ಮಿಕ ರತ್ನ ಎಂಬ ಪ್ರಶಸ್ತಿ ಯನ್ನು ಜಾರಿಗೆ ತಂದು ನಿಧನರಾದ ಕಾರ್ಮಿಕ ಮುಖಂಡರಿಗೆ ನೀಡಿ ಗೌರವಿಸ ಬೇಕೆಂದು ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ಶಾಸಕರು,ತಹಸೀಲ್ದಾರ್, ನಗರಸಭೆ ಪೌರಾಯುಕ್ತರು ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಐ.ಎಲ್.ಅರುಣ್ ಕುಮಾರ್, ಸೋಮಣ್ಣ,ಎಂ.ವಿ. ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಅಕ್ರಂಖಾನ್,ಶ್ರೀನಿವಾಸ್, ಆರ್ ಬಸವರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.