ವಿಜಯ ಸಂಘರ್ಷ
ಭದ್ರಾವತಿ : ಗಂಡ ಮಾಡಿದ ಸಾಲದಿಂದ ಬೇಸತ್ತ ಮಹಿಳೆ ಮತ್ತು ಆಕೆಯ ಮಗಳು ಒಂದೇ ಸೀರೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಹೃದಯವಿದ್ರಾವಕ ಘಟನೆ ಸುಭಾಷ್ ನಗರದಲ್ಲಿ ನಡೆದಿದೆ.
ಸುಭಾಷ್ ನಗರ ನಿವಾಸಿ ಧನಶೇಖರ್ ಎಂಬುವರ ಪತ್ನಿ ಸಂಗೀತ(40) ಹಾಗೂ 11 ವರ್ಷದ ಮಗಳು ಆತ್ಮಹತ್ಯೆಗೆ ಶರಣಾದವರು. ಕೊರೊನಾ ಹಿನ್ನೆಲೆ ಧನಶೇಖರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸಗಟು ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡಿ ಹೋಗುತ್ತಿದ್ದರ ಪರಿಣಾಮ ಬೇಸತ್ತು ಸಂಗೀತ ಮೊದಲು ತನ್ನ ಮಗಳಿಗೆ ಸೀರೆಯಲ್ಲಿ ನೇಣು ಬಿಗಿದು. ನಂತರ ಅದೇ ಸೀರೆಯಲ್ಲಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795