ಸಾಹಿತ್ಯ ನಿಲ್ಲಿಸಿದ ಪ್ರಕಾಶ್ ಆರ್​.ಕಮ್ಮಾರ್..?

 

ವಿಜಯ ಸಂಘರ್ಷ



ಶಿವಮೊಗ್ಗ: ತೀವ್ರ ಅನಾರೋಗ್ಯದ ಕಾರಣದಿಂದಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸಾಹಿತಿಪ್ರಕಾಶ್ ಆರ್​.ಕಮ್ಮಾರ್ ಇಂದು  ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.​

ಸಾಗರ ಶಿವಲಿಂಗಪ್ಪ ಪ್ರೌಢಶಾಲಾ ಶಿಕ್ಷಕರಾಗಿದ್ದ ಅವರು ನಂತರ ಶಿವಮೊಗ್ಗ ಡಿ.ವಿ.ಎಸ್. ಸಂಯುಕ್ತ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ತಮ್ಮ ವಿಶ್ರಾಂತಿ ಜೀವನವನ್ನು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಮತ್ತೂರಿನ ಶಾರದಾ ವಿಲಾಸ ಪ್ರೌಢಶಾಲಾ ಮತ್ತು ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು.

ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿ ಆಗಿದ್ದ ಅವರು ಕವಿ, ಕಥೆಗಾರ, ಲೇಖಕರಾಗಿಯೂ ಗುರುತಿಸಿ ಕೊಂಡಿದ್ದರು. ಟಿ. ಮಹಾಬಲೇಶ್ವರ ಭಟ್ಟರ ಜೊತೆ ಕಸಾಪ ಕಾರ್ಯದರ್ಶಿ ಆಗಿದ್ದ ಅವರು ಡಿ. ಮಂಜುನಾಥ್ ಜಿಲ್ಲಾ ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಸಾಗರ ತಾಲೂಕು ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮಾತ್ರವಲ್ಲ ಕಸಾಪ ಭವನಕ್ಕೆ ನಿವೇಶನ ಪಡೆಯುವಲ್ಲಿ ಶ್ರಮಿಸಿದ್ದರು.

ಕರ್ನಾಟಕ ಸಂಘದ ಕಾರ್ಯಕಾರಿ ಸದಸ್ಯರಾಗಿದ್ದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ, ಪುತ್ರಿ, ಪುತ್ರ ಮೋಹನ್ ಕಮ್ಮಾರ್, ಸಹೋದರ, ಸಹೋದರಿ ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಗಲಿಕೆಗೆ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ, ಪದಾಧಿಕಾರಿಗಳಾದ  ಎಸ್. ಶಿವಮೂರ್ತಿ, ಎಂ. ಎಂ. ಸ್ವಾಮಿ, ಟಿ. ಕೃಷ್ಣಪ್ಪ, ಭಾರತಿ ರಾಮಕೃಷ್ಣ, ಡಿ. ಗಣೇಶ್, ಪಿ. ಕೆ. ಸತೀಶ್, ಭೈರಾಪುರ ಶಿವಪ್ಪಗೌಡ, ಆರ್. ಜಯಪ್ರಕಾಶ್, ಯು. ಮಧುಸೂದನ್ ಐತಾಳ್, ವಿ. ಟಿ. ಸ್ವಾಮಿ ಸಂತಾಪ ಸೂಚಿಸಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು