ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಸುಮಾರು ಹನ್ನೆರಡು ಕೆಜಿ ತೂಕದ ಗೆಡ್ಡೆಯನ್ನು ಪತ್ತೆ ಮಾಡಿ ಡಾ: ಶ್ರೀನಿವಾಸ್ ಯಶಸ್ವಿ ಶಸ್ತ್ರ ಚಿಕೆತ್ಸೆ ನಡೆಸುವ ಮೂಲಕ ಡಾ: ಗೀತಾರವರು ಗರ್ಭದಲ್ಲಿದ್ದ ಮಗು ಹಾಗೂ ತಾಯಿಯ ಪ್ರಾಣ ಉಳಿಸಿದ್ದಾರೆ.
ಕೆಲವು ಇಂತಹ ಪ್ರಕರಣಗಳಿಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಹೋಗುವ ಪರಿಸ್ಥಿತಿ ಇತ್ತು. ಆದರೆ ಡಾ: ಗೀತಾ ಸರಕಾರಿ ಆಸ್ಪತ್ರೆಯಲ್ಲಿಯೇ ಯಶಸ್ವಿ ಶಸ್ತ್ರ ಚಿಕೆತ್ಸೆ ನಡಿಸಿದ್ದು ಸಾರ್ವಜನಿಕರು ಹಾಗೂ ರೋಗಿಯ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795