ವಿಜಯ ಸಂಘರ್ಷ
ಭದ್ರಾವತಿ: ಸಮೀಪದ ನಾಗತಿಬೆಳಗಲು ನಂಜುಡೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮದುವೆ ಊಟ ಸೇವಿಸಿ 158 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ಭದ್ರಾವತಿ, ಹೊಳೆಹೊನ್ನೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಅರದೊಟ್ಲು ಗ್ರಾಮದ ನಿವಾಸಿಯೊಬ್ಬರ ಮದುವೆ ಸಮಾರಂಭದ ಭಾಗವಹಿಸಿ ನಾಗತಿಬೆಳಗಲು ಕಲ್ಯಾಣ ಮಂದಿರದಲ್ಲಿ ಊಟ ಸೇವಿಸಿದವರು ಅಸ್ವಸ್ಥರಾಗಿದ್ದಾರೆ. ಬುಧವಾರ ಬೆಳಗ್ಗೆ ಊಟ ಸೇವಿದವರಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ವಾಂತಿ, ಬೇದಿ, ತಲೆಸುತ್ತು, ಜ್ವರ, ಹೊಟ್ಟೆನೋವು ಕಾಣಿಸಿಕೊಂಡಿದೆ. ಆಸ್ವಸ್ಥರನ್ನು ತಾಲ್ಲೂಕಿನ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಗಂಬೀರ ಸಮಸ್ಯೆ ಕಾಣಿಸಿಕೊಂಡ 15 ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಆಸ್ಪತ್ರೆಯಲ್ಲಿ 50 ಜನ ಹೊಳೆಹೊನ್ನೂರಿನ ಆಸ್ಪತ್ರೆಯಲ್ಲಿ 65 ಜನ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ಬಂದಿದ ಬ್ಯಾಡಗಿಯ ಹುಡಿಗಿ ಸಂಬಂಧಿಕರಲ್ಲಿ 15 ಜನ ಅಸ್ವಸ್ಥರಾಗಿದ್ದಾರೆ. ಅವರನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795