ವಿಜಯ ಸಂಘರ್ಷ/ಭದ್ರಾವತಿ
ಭದ್ರಾವತಿ : ತಾಲ್ಲೂಕಿನ ಶಂಕರಘಟ್ಟದ ಪಾಲಾಕ್ಷಪ್ಪನವರ ಮನೆಯ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 9 ನಾಡ ಬಂದೂಕು ವಶಕ್ಕೆ ಪಡೆದ ಘಟನೆ ನಡೆದಿದೆ.
ಶಂಕರಘಟ್ಟ ಗ್ರಾಮದ ವಾಸಿ ಪಾಲಾಕ್ಷಪ್ಪ ಎಂಬ ವ್ಯಕ್ತಿ ಯಾವುದೇ ಪರವಾನಿಗೆ ಇಲ್ಲದೆ ಹಳೆಯ ನಾಡ ಬಂದೂಕುಗಳನ್ನು ಅಕ್ರವಾಗಿ ಇಟ್ಟು ಕೊಂಡು ರಿಪೇರಿ ಮಾಡಿಕೊಡುವ ಸೋಗು ಹಾಕುತ್ತಿದ್ದನು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿಯ ಗುನ್ನೆ ಸಂಖ್ಯೆ 0108/2022 ಕಲಂ 3, 25(ಎ) ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಆರೋಪಿ ಶಂಕರಘಟ್ಟದ ನಿವಾಸಿ ಪಾಲಾಕ್ಷಪ್ಪ(47)ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನನಿಂದ ಪರವಾನಿಗೆ ಇಲ್ಲದ ಒಟ್ಟು 09 ಸಂಖ್ಯೆಯ ನಾಡ ಬಂದೂಕುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795