ಬಿಎಸ್ ಪಿ ವತಿಯಿಂದ ಪ್ರೊ: ಬಿ.ಕೃಷ್ಣಪ್ಪರವರ ಜನ್ಮದಿನ

 


ವಿಜಯಸಂಘರ್ಸ /ಭದ್ರಾವತಿ


ಬಹುಜನ ಸಮಾಜ ಪಾರ್ಟಿ ವತಿಯಿಂದ ಇಂದು ಪ್ರೊ:ಬಿ. ಕೃಷ್ಣಪ್ಪನವರ 85 ನೇ ಜನ್ಮದಿನಾಚರ ಣೆ ಹಮ್ಮಿಕೊಳ್ಳಲಾಗಿತ್ತು.

ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್ ಸರ್ದಾರ್ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಎಲ್ಲಾ ದಲಿತ ಸಂಘಟನೆಗಳು ಒಂದಾಗಿ ವಿಧಾನಸೌಧ ಪ್ರವೇಶ ಮಾಡಬೇಕೆಂದು ಕರೆ ನೀಡಿದರು. ಪಕ್ಷದ ಸಂಯೋಜಕ ಎಂ.ರಾಜೇಂದ್ರ ಮಾತನಾಡುತ್ತಾ ಪ್ರೊ: ಬಿ ಕೃಷ್ಣಪ್ಪ ನವರು ಕರ್ನಾಟಕ ದಲಿತರಿಗೆ ಆಶಾಕಿರಣವಾಗಿದ್ದರು. ನ್ಯಾಯ ದೊರಕಿಸಿಕೊಡುವ ಹೋರಾಟಗಳನ್ನು ಮಾಡುವ ಮೂಲಕ ಕಾನೂನು ಅರಿವನ್ನು ಮೂಡಿಸುತ್ತಾ ದೇವದಾಸಿ ಪದ್ಧತಿ ಹಾಗೂ ಅರೆಬೆತ್ತಲೆ ಪದ್ಧತಿ ಯಂತಹ ಅನಿಷ್ಠ ಕಾರ್ಯಕ್ರಮಗಳ ವಿರುದ್ಧ ಹೋರಾಡಿ ಆಶಾಭಾವನೆ ಉಂಟು ಮಾಡಿದರು.

ಪಕ್ಷದ ಮುಖಂಡ ಪಿ.ಮೂರ್ತಿ ಮಾತನಾಡಿ ದಲಿತರು ರಾಜ್ಯಾಧಿಕಾರ ಹಿಡಿಯಬೇಕು ಎಂಬುವುದು ಅವರ ದೊಡ್ಡ ಕನಸಾಗಿತ್ತು.

ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಹುಜನ ಸಮಾಜ ಪಾರ್ಟಿ ಮುಂದು ವರಿಸುತ್ತದೆ.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಚಂದ್ರು, ಶೋಭಾ ಮೂರ್ತಿ ಉಪಸ್ಥಿತರಿದ್ದರು.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು