ರಾಷ್ಟ್ರನಾಯಕರ ಮುಖಕ್ಕೆ ಮಸಿ ಎರಚಿರುವ ದುಷ್ಕರ್ಮಿ ಗಳನ್ನು ಬಂಧಿಸಿ

 


ವಿಜಯ ಸಂಘರ್ಷ /ಸಾಗರ


ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮತ್ತು ಯದುವೀರ್‌ ಸಿಂಗ್‌ ಅವರ ಮೇಲೆ ಮಸಿ ಎರಚಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕು ರೈತಸಂಘದ ಎಚ್.ಗಣಪತಿಯಪ್ಪ ಬಣದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಘಟನೆ ಅತ್ಯಂತ ಅಮಾನವೀಯವಾಗಿದೆ.

ರಾಜ್ಯದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಹಾಳು ಮಾಡಿರುವ ಪ್ರಯತ್ನ ಇದಾಗಿದೆ. ಕೃತ್ಯ ಎಸಗಿದವರು ರಾಜಕೀಯ ಕೃಪಾಪೋಷಿತ ಗೂಂಡಾಗಳಾಗಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಭರತ್‌ ಶೆಟ್ಟಿ ಸೇರಿದಂತೆ ಮೂವರನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರು ರಾಜಾರೋಷವಾಗಿ ತಿರುಗುತ್ತಿದ್ದಾರೆ. ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳದೆ ಇರುವ ಕೃತ್ಯವನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಹೊಯ್ಸಳ ಗಣಪತಿಯಪ್ಪ, ಭದ್ರೇಶ್‌ ಬಾಳಗೋಡು, ಕುಮಾರ ಗೌಡ, ವಿಜಯ ಯಲಕುಂದ್ಲಿ, ದೇವರಾಜ ಬೆಳಂದೂರು, ಸುರೇಶ್‌, ಸಂತೋಷ್‌, ದತ್ತ, ಚಂದ್ರಪ್ಪ, ನಾಗರಾಜ್‌, ಶ್ರೀಕಾಂತ್‌ ನಾಯ್ಕ, ದೀಕ್ಷಾ, ಟಿ.ಆರ್. ಕೃಷ್ಣಪ್ಪ, ಡಿ. ದಿನೇಶ್‌ ಇನ್ನಿತರರು ಇದ್ದರು.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು