ಲಾಡ್ಜ್ ನಲ್ಲಿ ವ್ಯಕ್ತಿಯ ಕತ್ತು ಸೀಳಿ ಬರ್ಬರ ಹತ್ಯೆ...?

ವಿಜಯ ಸಂಘರ್ಷ



ಭದ್ರಾವತಿ: ನಗರದ ಬಿಎಚ್ ರಸ್ತೆಯ ರೈಲ್ವೆ ನಿಲ್ದಾಣ ಮುಂಭಾಗದ ಲಾಡ್ಜ್' ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹಾಸನ ಮೂಲದ ಪರ್ವೇಜ್ ಖಾನ್ ಎಂಬಾತನ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. 

ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ಮೂಲದ ಆಯೇಶಾ ಎಂಬಾಕೆ ಮತ್ತು ಪರ್ವೇಜ್ ಖಾನ್ ಎಂಬ ಜಾವಗಲ್ ಮೂಲದ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 

ಇದೇ ವಿಚಾರಕ್ಕೆ ಪತಿ ಆಯೇಶಾರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ನಿನ್ನೆ ಪರ್ವೇಜ್ ಹಾಗೂ ಆಯೇಶಾ ಭದ್ರಾವತಿಗೆ ಬಂದಿದ್ದಾರೆ. ಅಲ್ಲಿನ ಲಾಡ್ಜ್'ವೊಂದರಲ್ಲಿ ರೂಂ ಮಾಡಿ ಕೊಂಡಿದ್ದಾರೆ.

ಕೊಠಡಿಯಲ್ಲಿ ಆಯೇಶಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ ಎನ್ನಲಾಗಿದ್ದು, ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಬಳಿಕ ರೂಮಿನಿಂದ ಆಯೇಶಾ ವಾಪಸ್ ತೆರಳಿ, ಹಾಸನ ಪೊಲೀಸರ ಬಳಿ ಹಾಜರಾಗಿದ್ದಾಳೆ. ಸದ್ಯ ಅಲ್ಲಿಂದ ಮಾಹಿತಿ ಪಡೆದಿರುವ ಹಳೇನಗರ ಠಾಣೆಯ ಪೊಲೀಸರು, ಆಯೇಶಾ ಳನ್ನು ಕರೆತಂದು, ಸ್ಥಳ ಮಹಜರ್ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು