ಬಿಎಸ್ ವೈ ಮನೆ ಮೇಲಿನ ದಾಳಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ: ನಾಗರಾಜ್ ಗೌಡ

 ವಿಜಯ ಸಂಘರ್ಷ



ಶಿಕಾರಿಪುರ: ಬಂಜಾರ ಸಮುದಾಯ ನಡೆಸಿದ ಒಳಮಿಸಲಾತಿ ಹೋರಾಟದ ಪ್ರತಿಭಟನೆಯ ವೇಳೆ ಬಿಎಸ್ ವೈ ಮನೆ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಧ್ಯಮದಲ್ಲಿ ಹೇಳುತ್ತಿರುವುದು ಸತ್ಯಕ್ಕೆ ದೂರವಾ ಗಿದ್ದು ಪ್ರತಿಭಟನೆಯಲ್ಲಿ ಎಲ್ಲಾ ಪಕ್ಷ ದವರು ಭಾಗಿಯಾಗಿ ಮೀಸಲಾತಿಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ ಸ್ಪಷ್ಟನೆ ನೀಡಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಹಶೀಲ್ದಾರ್ ಪ್ರತಿಭಟನಾ ಕಾರರ ಮನವಿಗೆ ಸ್ಪಂದಿಸಿದ ಕಾರಣ ಯಡಿಯೂರಪ್ಪ ಮನೆಯತ್ತ ಧಾವಿಸಿ ದ್ದರು, ಅಲ್ಲಿ ನಡೆದ ಘಟನೆಗಳಿಗೆ ಪೊಲೀಸರ ಅಸಹಾಯಕತೆ ಕಾರಣ, ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಬಂಜಾರ ಭೋವಿ ಕೊರಚಾ ಕೊರಮ ಸಮಾಜ ಮೀಸಲು ಕಡಿತಗೊಳಿಸಿ ದ್ದರು, ಇದರಿಂದ ಬೇಸರಗೊಂಡ ಸಮುದಾಯಗಳು ಸಾಂಕೇತಿಕವಾಗಿ ಧರಣಿ ಮಾಡಲು ಆಯೋಜಿಸಿದ್ದರು, ಬಿಎಸ್ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಅಷ್ಟೇ ಅಲ್ಲ ತಾಲೂಕಿನ ಶಾಸಕರು ಹೌದು ಅವರ ಮಗ ಸಂಸದ ಬಿ ವೈ ರಾಘವೇಂದ್ರ ಅಪ್ಪ ಮಗನ ಮೂಲಕ ಸಿಎಂ ಗೆ ಮನವಿ ನೀಡಿದರೆ ಮೀಸಲು ಹಕ್ಕು, ರಕ್ಷಣೆ ಮಾಡಬಹುದು ಎಂಬ ಉದ್ದೇಶ ಸಮುದಾಯಕಿತ್ತು.


ಎಲ್ಲರೂ ಸೌಜನ್ಯದಿಂದಲೇ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿ ದ್ದರು ಆದರೆ ಪೊಲೀಸರು ಪ್ರತಿಭಟ ನಾಕಾರರಿಗೆ ಯಾವುದೇ ಸಹಾಯ ಮಾಡಲಿಲ್ಲ ತಹಶೀಲ್ದಾರ್ ಸ್ಪಂದಿಸ ಲಿಲ್ಲ ಹಾಗಾಗಿ ಯಡಿಯೂರಪ್ಪ ಅಥವಾ ರಾಘವೇಂದ್ರ ಮನೆಯಲ್ಲಿ ದ್ದರೆ ಅವರಿಗೆ ಮನವಿ ನೀಡಬಹು ದೆಂದು ಯಡಿಯೂರಪ್ಪ ನಿವಾಸದತ್ತ ಧಾವಿಸಿದರು. ಆಗ ಪೊಲೀಸರು ಪ್ರತಿಭಟನಾ ನಿರತರನ್ನು ತಡೆದು ಬ್ಯಾರಿಕೇಡ್ ಹಾಕಿದರು.


 ತಹಶೀಲ್ದಾರರು ಸ್ಪಂದಿಸಲಿಲ್ಲ ಕ್ಷೇತ್ರದ ಎಂಎಲ್ಎಗೆ ಮನವಿ ಕೊಡಲು ಹೋದರೆ ಪೊಲೀಸ್ ನವರು ಬಿಡಲಿಲ್ಲ ಅಂದಾಗ ಪ್ರತಿಭಟನಾ ಕಾರರು ಉದ್ರಿಕ್ತರಾದರು. ಅನೇಕ ಮಹಿಳೆಯರು ಕೂಡ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು ಆದರೆ ಮಹಿಳಾ ಪೊಲೀಸರು ಬಂದೋ ಬಸ್ತ್ ನಲ್ಲಿ ಇರಲಿಲ್ಲ ಮುಗ್ಧ ಮಹಿಳೆಯರ ಮೇಲೆ ಕೂಡ ಪೊಲೀಸ್ ನವರು ದೌರ್ಜನ್ಯ ನಡೆಸಿದ್ದಾರೆ, ಲಾಟಿಚಾರ್ಜ್ ಮಾಡಿದ್ದಾರೆ ಹಾಗಾಗಿ ಪ್ರತಿಭಟನಾ ಕಾರರು ಕೆರಳಿ ಕಾನೂನು ಕೈಗೆ ತೆಗೆದುಕೊಂಡರು ಎಂದು ಪ್ರಶ್ನಿಸಿದರು.

       

            ವರದಿ ಹುಲಿಗಿ ಕೃಷ್ಣ

 ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು