ಭದ್ರಾವತಿ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಸಂಜೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಏ:14ರಂದು ಭಾರತರತ್ನ ಡಾ: ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸಲು ತೀರ್ಮಾನಿಸಲಾಯಿತು. ಪ್ರಗತಿಪರ ಸಂಘಟನೆ ಮುಖಂಡ ಸುರೇಶ್ ನೇತೃತ್ವ ವಹಿಸಿದ್ದರು. ಏ:14 ರ ಬೆಳಿಗ್ಗೆ 10:30 ಕ್ಕೆ ಒಂದು ಬಾಬಾ ಸಾಹೇಬರ ವಿಚಾರ ಮಂಥನ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಭದ್ರಾವತಿಯ ಎಲ್ಲಾ ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿಸಿ ಬೃಹತ್ ಕಾರ್ಯಕ್ರಮ ವನ್ನು ಒಂದೇ ವೇದಿಕೆ ಅಡಿಯಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಮೋಚಿ ಮಹಿಳಾ ಸಮಾಜ, ಜಯ ಕರ್ನಾಟಕ ಸಂಘಟನೆ, ಆದಿ ದ್ರಾವಿಡ ತಮಿಳು ಹಿತರಕ್ಷಣ ಸಮಿತಿ, ಛಲವಾದಿ ಮಹಾಸಭಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘ, ತೆಲುಗು ಕ್ರಿಶ್ಚಿಯನ್ ಅಸೋಸಿ ಯೇಷನ್, ವಿಐಎಸ್ಎಲ್ ಕಂಟ್ರಾಕ್ಟ್ ವರ್ಕರ್ಸ್ ಯೂನಿಯನ್, ದಲಿತ ನೌಕರರ ಒಕ್ಕೂಟ, ಬಾಪೂಜಿ ಹರಿಜನ ಸೇವಾ ಸಂಘ, ಕರ್ನಾಟಕ ಜನ ಸೈನ್ಯ, ಪೌರಕಾರ್ಮಿಕ ಸಂಘ, ಬಿಪಿಎಲ್ ಸಂಘಟನೆಗಳ ಮುಖಂಡ ರಾದ ಎನ್ ಕೃಷ್ಣಪ್ಪ, ಟಿ ರಮೇಶ್, ಡಿ ರಾಜು, ಬಿ. ರಮೇಶ್, ಚಂದ್ರಣ್ಣ, ಮಸ್ತಾನ್ ಮುಂತಾದವರಿದ್ದರು.

 ವಿಜಯ ಸಂಘರ್ಷ



ಭದ್ರಾವತಿ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಸಂಜೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಏ:14ರಂದು ಭಾರತರತ್ನ ಡಾ: ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸಲು ತೀರ್ಮಾನಿಸಲಾಯಿತು.


ಪ್ರಗತಿಪರ ಸಂಘಟನೆ ಮುಖಂಡ ಸುರೇಶ್ ನೇತೃತ್ವ ವಹಿಸಿದ್ದರು.

ಏ:14 ರ ಬೆಳಿಗ್ಗೆ 10:30 ಕ್ಕೆ ಒಂದು ಬಾಬಾ ಸಾಹೇಬರ ವಿಚಾರ ಮಂಥನ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು.


 ಭದ್ರಾವತಿಯ ಎಲ್ಲಾ ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿಸಿ ಬೃಹತ್ ಕಾರ್ಯಕ್ರಮ ವನ್ನು ಒಂದೇ ವೇದಿಕೆ ಅಡಿಯಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. 

ಸಭೆಯಲ್ಲಿ ಮೋಚಿ ಮಹಿಳಾ ಸಮಾಜ, ಜಯ ಕರ್ನಾಟಕ ಸಂಘಟನೆ, ಆದಿ ದ್ರಾವಿಡ ತಮಿಳು ಹಿತರಕ್ಷಣ ಸಮಿತಿ, ಛಲವಾದಿ ಮಹಾಸಭಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘ, ತೆಲುಗು ಕ್ರಿಶ್ಚಿಯನ್ ಅಸೋಸಿ ಯೇಷನ್, ವಿಐಎಸ್ಎಲ್ ಕಂಟ್ರಾಕ್ಟ್ ವರ್ಕರ್ಸ್ ಯೂನಿಯನ್, ದಲಿತ ನೌಕರರ ಒಕ್ಕೂಟ, ಬಾಪೂಜಿ ಹರಿಜನ ಸೇವಾ ಸಂಘ, ಕರ್ನಾಟಕ ಜನ ಸೈನ್ಯ, ಪೌರಕಾರ್ಮಿಕ ಸಂಘ, ಬಿಪಿಎಲ್ ಸಂಘಟನೆಗಳ ಮುಖಂಡ ರಾದ ಎನ್ ಕೃಷ್ಣಪ್ಪ, ಟಿ ರಮೇಶ್, ಡಿ ರಾಜು, ಬಿ. ರಮೇಶ್, ಚಂದ್ರಣ್ಣ, ಮಸ್ತಾನ್ ಮುಂತಾದವರಿದ್ದರು.


 ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು