ಬೆರೆಯದೆ ಮನವೇ...

 ವಿಜಯ ಸಂಘರ್ಷ



ಚದುರಿ ಹೋದ ಮೋಡ ಮತ್ತೆ ಕಲೆಯಲಾರದೇ... 

ಒಡೆದು ಹೋದ ಮನವು ಮತ್ತೆಸೇರಲಾರದೇ.. 

ನಾನೇ ಮೇಲು ಎಂಬೀ ಮೋಡ ಕರಗಲಾರದೇ.. 

ಬದುಕಿನಲ್ಲಿ ಅರಿವ ಜೀವ ನಾ ಆಗಬಾರದೇ.. ||


ಎಷ್ಟು ದಿನದ ಮುನಿಸು ನಿನದು ಸೋಲಬಾರದೇ.. 

ಅಷ್ಟು ಇಷ್ಟು ನನಗೆ ನಿನಗೆ ಇದ ಬಿಡಬಾರದೇ.. 

ಕಷ್ಟಗಳಲಿ ಕೈಯನಿಡಿದು ನಡೆಸಬಾರದೇ... 

ನಿಷ್ಠೆಯಿಂದ ಪ್ರೀತಿ ಹಂಚಿ ನಾಳೆಯೂ ಬದುಕಬಾರದೇ||


ಅಹಂಕಾರ ಕೋಪಗಳನು ಸುಡಬಾರದೇ... 

ದ್ವೇಷವೆಂಬ ಒಡಲಾಗ್ನಿಯ ಆರಿಬಾರದೇ... 

ತಪ್ಪಿದಾಗ ಒಪ್ಪಿಕೊಂಡು ತಿದ್ದಬಾರದೇ... 

ಕ್ಷಮಿಸಿ ಸಹಿಸಿ ಒಡಗೂಡಿ ನಡೆಯಬಾರದೇ.. ||


ಯಾರಿಲ್ಲಿ ಶಾಶ್ವತವೋ ಅರಿಯಬಾರದೇ... 

ಇರುವ ನಾಲ್ಕು ದಿನದಲ್ಲಿ ಒಲವು ಬಿತ್ತದೇ... 

ಬೆತ್ತಲಾಗಿ ಹೋಗುವಾಗ ಹೆಗಲು ಇಲ್ಲದೇ.. 

ಇದ್ದಾಗ ಹೊಂದಿಕೊಂಡು ಬಾಳಬಾರದೇ.. ||


ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ


ಸುದ್ದಿ ಹಾಗೂ ಜಾಹಿರಾತುಗಳಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು