ಮೊಬೈಲ್‌ಗಳ ದುರ್ಬಳಕೆ ಯಿಂದ ಮಕ್ಕಳು ದಾರಿ ತಪ್ಪದಂತೆ ಎಚ್ಚರಿಸಿ

ವಿಜಯ ಸಂಘರ್ಷ
ಭದ್ರಾವತಿ: ಮಕ್ಕಳು ಹಕ್ಕುಗಳ ಬಳಕೆ ಯೊಂದಿಗೆ ತಮ್ಮ ರಕ್ಷಣೆ ಮಾಡುವುದರ ಜೊತೆಗೆ ಅಭಿವೃದ್ಧಿಪಥದಲ್ಲಿ ಸಾಗಲು ಕರೆ ನೀಡುವುದರ ಜೊತೆಗೆ ಮೊಬೈಲ್ ಗಳ ದುರ್ಬಳಕೆಯಿಂದ ಮಕ್ಕಳು ದಾರಿ ತಪ್ಪದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಸಂಪನ್ಮೂಲ ವ್ಯಕ್ತಿ ಪ್ರಮೋದ್ ಹೇಳಿದರು.

ಕರುಣ ಸೇವಾ ಕೇಂದ್ರದಲ್ಲಿ ಸೆಂಟ್ ಚಾರ್ಲ್ಸ್ ಪ್ರೌಢಶಾಲೆಯ 175 ವಿದ್ಯಾರ್ಥಿ ಗಳಿಗೆ ಮಾನವ ಕಳ್ಳ ಕಾರ್ಯಗಾರಕ್ಕೆ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ರೋ ಕಾಯ್ದೆ ಕುರಿತು ಮಾತನಾಡಿದರು.

ಸಹಾಯಕ ಸಂಯೋಜಕ ಶ್ರುತಿ ಮಾತನಾಡಿ, ಮಕ್ಕಳಿಗೆ ಸಾಧನ ಪದದಲ್ಲಿ ಗುರಿಯನಿಟ್ಟು ಕೊಳ್ಳುವಂತೆ ಮಕ್ಕಳಿಗೆ ತಿಳಿಸುತ್ತಾ ಬಾಲ್ಯ ವಿವಾಹ ತಡೆಗಟ್ಟಲು ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳ ಸಹಾಯ ವಾಣಿ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆಯ ಬಗ್ಗೆ ತಿಳುವಳಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಸೇಂಟ್ ಚಾರ್ಲ್ಸ್ ಪ್ರೌಢಶಾಲೆಯ ಮುಕ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸಾ ಡಿಪೋಸ್ಟ್, ಶಾಲೆ ಮುಖ್ಯಸ್ಥರಾದ ಸಿಸ್ಟರ್ ಪರ ಕರುಣಾ ಸೇವಾ ಕೇಂದ್ರದ ನಿರ್ದೇಶಕ ಹೆಲಿನ ಮೋರಸ್ ಹಾಗೂ ಸೆಂಟ್ ಚಾಲ್ಸ್ ಪೌಢಶಾಲೆಯ ಶಿಕ್ಷಕ ವೃಂದ ಕಾರ್ಯಕರ್ತೆಯರಾದ ಗೇಸಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು