ವಿಜಯ ಸಂಘರ್ಷ
ಶಿಕಾರಿಪುರ: ನಮ್ಮದು ವ್ಯವಸ್ಥಿತ ಅರ್ಥಪೂರ್ಣ ಪ್ರಜಾಪ್ರಭುತ್ವ ಇಡೀ ರಾಷ್ಟ್ರದಲ್ಲಿ ಅತ್ಯಾಮೂಲ್ಯ ಗೌರವತದ ಪ್ರಜಾಪ್ರಭುತ್ವಕ್ಕೆ ಮೂಲ ಕಾರಣ
ಡಾ.ಅಂಬೇಡ್ಕರ್ ರವರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ವೈ.ತಿಪ್ಪೇಶ್ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಲಿತ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನವಂಬರ್ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳ ಲಾಯಿತು ಇದರ ಅಂಗವಾಗಿ ನಾವು ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ ಸರ್ವರಿಗೂ ಸಮಾನತೆಯಾಗಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲವಾಗಿದ್ದು, ಸಂವಿಧಾನ ಜಾರಿಗೆ ಬಂದ ದಿನದಿಂದಲೇ ನಮ್ಮೆಲ್ಲರನ್ನು ರಕ್ಷಿಸುವ ಹೊಸ ಕಾನೂನಿನ ಶಕೆ ಆರಂಭ ವಾಯಿತು. ಸಂವಿಧಾನದಲ್ಲಿ ಸಮಾನತೆಯ ಅರಿವನ್ನು ಮೂಡಿಸಿದ ಕೀರ್ತಿ ಡಾ:ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
ಬ್ರಿಟನ್ ಐರ್ಲ್ಯಾಂಡ್ ಜಪಾನ್ ಯುಎಸ್ಎ ದಕ್ಷಿಣ ಆಫ್ರಿಕಾ ಜರ್ಮನಿ ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳಲ್ಲಿ ನಮ್ಮ ಸಂವಿಧಾನದ ಕೆಲವು ಅಂಶಗಳನ್ನು ಎರವಲು ಪಡೆಯಲಾಗಿದೆ.ಭಾರತ ಸಂವಿಧಾನ ರಚಿಸಲು ಡಾ: ಬಿ.ಆರ್.ಅಂಬೇಡ್ಕರ್ ಅವರು ಸತತ ಎರಡು ವರ್ಷ 11 ತಿಂಗಳು 17 ದಿನಗಳ ಅವಧಿ ಪಡೆದುಕೊಂಡರು.ಕೈ ಬರವಣಿಗೆಯ ಮೂಲ ಸಂವಿಧಾನ ಪುಸ್ತಕವನ್ನು ವಿಲಿಯಂ ನಿಂದ ಕೂಡಿದ ಕೇಸ್ ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ನಾವೆಲ್ಲರೂ ಭಾರತ ಸಂವಿಧಾನದಂತೆ ನಡೆದುಕೊಂಡಲ್ಲಿ ಸಮಾನತೆಯ ಜೊತೆಗೆ ಪ್ರಬುದ್ಧತೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಪ್ಪ, ಧರಣಪ್ಪ, ಪರಸಪ್ಪ ಜಾದವ್, ಪರಶುರಾಮ್, ನಾಗರಾಜ್, ರಾಜು ಕೆ, ಸುಜಾತ, ಶಾಂತಮ್ಮ, ಇಂದ್ರಮ್ಮ, ಚಂದ್ರಕಲಾ, ಶಿಲ್ಪಾ ರಾಜೇಶ್ವರಿ ಉಪಸ್ಥಿತರಿದ್ದರು.