ಶಾಸಕರ ಅಭಿವೃದ್ಧಿ ಕಾರ್ಯ ಗಳನ್ನು ಸಹಿಸದವರಿಂದ ಇಲ್ಲ ಸಲ್ಲದ ಆರೋಪ: ಫ್ರಾನ್ಸಿಸ್

ವಿಜಯ ಸಂಘರ್ಷ
ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ರವರ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕೆಲವರು ಹತಾಶೆಯಿಂದ ಶಾಸಕರ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬೆಳವಣಿಗೆ ಖಂಡನೀಯ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಭದ್ರಾವತಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಫ್ರಾನ್ಸಿಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಶಾಸಕರ ಕುಟುಂಬದ ಸದಸ್ಯರ ಜನಪ್ರಿಯತೆ ಹಾಗು ಇತರರು ಪಕ್ಷಗಳನ್ನು ತೊರೆದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ತಂಡೋಪಾತಂಡವಾಗಿ ಸೇರುತ್ತಿರು ವುದನ್ನು ಕಂಡು ಕೆಲವರು ಸಹಿಸಿಕೊಳ್ಳ ಲಾಗದೆ ಶಾಸಕರ ಹಾಗೂ ಅವರ ಕುಟುಂಬ ವರ್ಗದ ಮೇಲೆ ಯಾವುದೇ ಆಧಾರವಿಲ್ಲದೆ ಇಲ್ಲ ಸಲ್ಲದ ಆರೋಪವನ್ನು ಮಾಡಿ ಶಾಸಕರ ಕುಟುಂಬದ ತೇಜೋವಧೆಗೆ ಮುಂದಾಗಿರು ವುದು ಖಂಡನಿಯ ಎಂದು ತಿಳಿಸಿದ್ದಾರೆ.

ಕ್ಷೇತ್ರದ ಜನಕ್ಕೆ ಸುಳ್ಳು ಮಾಹಿತಿಯನ್ನು ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ರಾಜಕೀಯ ವಾಗಿ ಲಾಭ ಪಡೆಯಲು ಕೆಲವರು ತುದಿಕಾಲಿ ನಲ್ಲಿ ನಿಂತಿರುವುದು ಹಾಸ್ಯಾಸ್ಪದ. ಆದರೆ ಅವರ ಪ್ರಯತ್ನ ಎಂದಿಗೂ ಫಲಿಸುವುದಿಲ್ಲ. ಕ್ಷೇತ್ರದ ಜನತೆ ಹಾಗೂ ಮತದಾರ ಬಾಂಧವರು ಪ್ರಬುದ್ಧರಾಗಿದ್ದು ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಮತೊಮ್ಮೆ ರಾಜಕೀಯವಾಗಿ ತಕ್ಕ ಪಾಠವನ್ನು ಕಲಿಸುವ ದಿನ ತುಂಬದೂರವಿಲ್ಲ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು