ಜಿಗಜಿಣಗಿಯವರಿಂದ ಶೂನ್ಯ ಸಾಧನೆ: ಕಲ್ಲು ದೇಸಾಯಿ

ವಿಜಯ ಸಂಘರ್ಷ 
ವಿಜಯಪುರ: ಮೂರು ಸಲ ಅಧಿಕಾರ ದಲ್ಲಿರುವ ಸಂಸದರಿಂದ ಕೊಲ್ಹಾರ ಪಟ್ಟಣಕ್ಕೆ ಯಾವುದೇ ಉಪಯೋಗ ವಾಗಿಲ್ಲ ಎಂದು ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸದ್ಯದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಉತ್ತಮ ಸಂಘಟಕರು, ಅಭಿವೃದ್ಧಿ ಪರ ಚಿಂತಕ ರಾಗಿರುವುದರಿಂದ ಇವರನ್ನು ಗೆಲ್ಲಿಸುವುದು ಅನಿವಾರ್ಯ ಎಂದರು. 

ಜಿಲ್ಲೆ ಮತ್ತು ನಮ್ಮ ಪಟ್ಟಣದ ಪ್ರಗತಿಗೆ ಆಲಗೂರರು ಶ್ರಮಿಸಲಿದ್ದಾರೆ. ಜಿಗಜಿಣಗಿಯವರಿಂದ ಸಾಮಾನ್ಯ ಜನರೂ ಜಿಗುಪ್ಸೆ ಹೊಂದಿದ್ದಾರೆ ಎಂದರು.

ಮುಖಂಡರಾದ ಮಲ್ಲು ದೇಸಾಯಿ, ಮುಸ್ಕಾನ್ ಶಿರಬೂರ, ರಫೀಕ್ ಪಕಾಲಿ, ಬಿಎಸ್. ಪತಂಗಿ, ಕಮಲವ್ವ ಮಾಕಾಳಿ, ಗಂಗಾಧರ ಸಂಬಣ್ಣಿ, ಉಸ್ಮಾನ್ ಪಟೇಲ, ದಸ್ತೀಗರಸಾಬ್ ಸೇರಿದಂತೆ ನೂರಾರು ಸ್ಥಳೀಯರು, ಪ್ರಮುಖರು ಭಾಗವಹಿಸಿದ್ದರು.

ಇದು ಬದಲಾವಣೆಯ ಕಾಲ:

ರಮೇಶ ಜಿಗಜಿಣಗಿಯವರಿಂದ ಏನೂ ಲಾಭವಾಗಿಲ್ಲ ಎನ್ನುವುದು ನಮ್ಮ ಟೀಕೆಯಲ್ಲ, ಇದು ವಾಸ್ತವ ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಹೇಳಿದರು.

ಎರಡು ಸಲ ಚಿಕ್ಕೋಡಿ, ಮೂರು ಸಲ ವಿಜಯಪುರ ಎಂಪಿಯಾಗಿ ಅವರ ಸಾಧನೆ ಶೂನ್ಯ. ಸದನದಲ್ಲಿ ಜಿಲ್ಲೆಗಾಗಿ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳಿಲ್ಲ.ಇದು ಬದಲಾವಣೆ ಕಾಲವಾಗಿದ್ದು, ನನಗೆ ಅವಕಾಶ ನೀಡಿದರೆ ನನ್ನ ಅನುಭವ ಹಾಗೂ ಪ್ರಾಮಾಣಿಕ ಶ್ರಮದಿಂದ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು