ವಿಜಯ ಸಂಘರ್ಷ
ಹೊಸನಗರ: ತಾಲ್ಲೂಕಿನ ರಿಪ್ಪನ್‌ಪೇಟೆ ಸಾಗರ ರಸ್ತೆಯ ಎಪಿಎಂಸಿ ಮುಂಭಾಗ ದಲ್ಲಿ ಸಮರ್ಪಕವಾದ ಸೂಚನ ಫಲಕವಿಲ್ಲದ ಕಾರಣ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ಟಾಟಾ ಇಂಡಿಕಾ ಕಾರಿನಲ್ಲಿ ಇಬ್ಬರು ಸಣ್ಣ ಮಕ್ಕಳು ಸೇರಿ, ಐವರು ಪ್ರಯಾಣಿಸುತಿದ್ದರು. ದೇವದಾಸ್ ಎಂಬುವವರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು ಪತ್ನಿ ಸವಿತಾ ರವರ ಕಾಲು ಮುರಿದಿದೆ, ಮಗಳಿಗೆ ತಲೆಗೆ ಪೆಟ್ಟಾಗಿದೆ.
ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಸಾಗರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತಿದ್ದು ಎಪಿಎಂಸಿ ಮುಂಭಾಗ ದಲ್ಲಿ ಡಿವೈಡರ್ ನಿರ್ಮಾಣ ಮಾಡಲಾಗಿದ್ದು ಆದರೆ ಡಿವೈಡರ್ ಗೆ ಯಾವುದೇ ಸೂಚನ ಫಲಕವಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಅಪಘಾತ ನಡೆಯುತ್ತಿದ್ದು ಈ ಸಂಬಂಧ ಸಂಬಂಧ ಪಟ್ಟ ಅಧಿಕಾರಿಗಳು, ಗುತ್ತಿಗೆದಾರನಿಗೆ ತಿಳಿಸಿದ್ದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗುತ್ತಿದೆ.
ಒಟ್ಟಾರೆಯಾಗಿ ವಾಹನ ಚಾಲಕರಿಗೆ ರಾತ್ರಿ ಸಮಯದಲ್ಲಿ ಡಿವೈಡರ್ ಗಮನಕ್ಕೆ ಬಾರದ ಹಿನ್ನಲೆಯಲ್ಲಿ ಈ ಸ್ಥಳದಲ್ಲಿ ಅಪಘಾತ ನಡೆಯುತ್ತಿದ್ದು ಕೂಡಲೇ ಈ ಸ್ಠಳದಲ್ಲಿ ಸೂಚನಾ ಫಲಕ ಅಳವಡಿಸಿ ಮುಂದಾಗುವ ಅನಾಹುತ ಭಾರಿ ಅನಾಹುತಗಳನ್ನು ತಡೆಯಲಿ ಮುಂದಾಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.