ವಿಜಯ ಸಂಘರ್ಷ ನ್ಯೂಸ್
ರಾಯಚೂರು: ದುರ್ಗದ ಸಿರಿ ದಶರಥ ಸಾವೂರ್ಗೆ ರಾಷ್ಟ್ರೀಯ ಗ್ರೀನರಿ ಅವಾರ್ಡ್ ಹಳ್ಳಿಯಿಂದ ಬಂದು ಟಿವಿ-5 ಅಸೋಸಿಯೆಟ್ ಎಡಿಟರ್ ಆದ ಸಾಧಕನಿಗೆ ಪುರಸ್ಕಾರ
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ದೇವದುರ್ಗದ ಪ್ರತಿಭೆ ದಶರಥ ಸಾವೂರ್ಗೆ ರಾಷ್ಟ್ರ ಮಟ್ಟದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಒಲಿದು ಬಂದಿದೆ.
ರಾಜ್ಯದ ವಿವಿಧ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಗ್ರೀನರಿ ಅವಾರ್ಡ್ ನೀಡಲಾಗುತ್ತಿದೆ. ಪ್ರತಿಷ್ಠಿತ ಪ್ರಶಸ್ತಿ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ಒಲಿದು ಬಂದಿದ್ದು ಸಾಧಕನ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ.
ತಾಲೂಕಿನ ಪುಟ್ಟ ಗ್ರಾಮ ಯರಮಸಾಳದಲ್ಲಿ ಬೆಳೆದ ದಶರಥ ಸಾವೂರ್ ಹಳ್ಳಿಯಲ್ಲಿ ಕಲಿತು ಇಂದು ಟಿವಿ-5 ಚಾನೆಲ್ನ ಅಸೋಸಿಯೆಟ್ ಎಡಿಟರ್ ఆగి ಕಾರ್ಯನಿರ್ವಹಿಸುತ್ತಿದ್ದಾರೆ. ದಶರಥ ಸಾವೂರ್ 2010 ರಲ್ಲಿ ಸಮಯ ಟಿವಿ ಮೂಲಕ ಮಾಧ್ಯಮ ರಂಗಕ್ಕೆ ಧುಮುಕಿದ್ದರು. ಅಂದಿನಿಂದ ಹಿಂದುರುಗಿಯೇ ನೋಡಿಲಿಲ್ಲಾ.
ಸಮಯ ಟಿವಿ ರಾಯಚೂರು ವರದಿಗಾರ ನಾಗಿ ನಂತರ ಜಿಲ್ಲಾ ಬಾಗಲಕೋಟೆ ಹಾಗೂ ಹಾಸನ ಜಿಲ್ಲೆಯ ಟಿವಿ-9 ಜಿಲ್ಲಾ ವರದಿಗಾರ ರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ವಿಜಯವಾಣಿಯ ಪತ್ರಿಕೆ ರಾಜಕೀಯ ವಿಶ್ಲೇಷಕರಾಗಿ, ನ್ಯೂಜ್ 18 ಚಾನೆಲ್ ವರದಿಗಾರರಾಗಿ, ಬಳಿಕ ಟಿವಿ 5 ನಿರೂಪಕ ರಾಗಿ ಸದ್ಯ ಟಿವಿ-5 ಅಸೋಸಿಯೆಟ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ ರಂಗದಲ್ಲಿ ಸುಮಾರು ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಾಧನೆಗೆ 14 ವರ್ಷಗಳಿಂದ ಸಾಧನೆಯ ಹಾದಿ 2010 ರಲ್ಲಿ ಸಮಯ ಟಿವಿಯಲ್ಲಿ ಇನ್ಸುಟ್ನಲ್ಲಿ ಕಾರ್ಯಾರಂಭ, ಸಮಯ ಟಿವಿಯ ರಾಯಚೂರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ, ಅಲ್ಲಿಂದ ಹೈದರಾಬಾದನ ವರದಿಗಾರನಾಗಿ ಮುಂದುವರಿಸಿದ್ದಾರೆ.
2012 ರಲ್ಲಿ ಟಿವಿ9 ಹುಬ್ಬಳ್ಳಿ ವರದಿಗಾರರಾಗಿ, ನಂತರದಲ್ಲಿ ಬಾಗಲಕೋಟೆ ಜಿಲ್ಲೆಯ ಟಿವಿ9 ವರದಿಗಾರರಾಗಿ ಸೇವೆ. 2014 ರಲ್ಲಿ ಹಾಸನ ಜಿಲ್ಲೆಯ ಟಿವಿ9 ವರದಿಗಾರರಾಗಿ ಪ್ರಖ್ಯಾತಿ ಪಡೆದಿದ್ದಾರೆ. ಹಾಸನದಲ್ಲಿ ವರದಿಗಾರರಾಗಿದ್ದ ವೇಳೆ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದು ಇವರ ವರದಿಗಾರಿಕೆ.
ಅರಸೀಕೆರೆ ತಾಲೂಕು ಕಾವಲುಗಾರರ ಗೊಲ್ಲರ ಹಟ್ಟಿಗಳು, ಮೌಡ್ಯ ಆಚರಣೆ
ಮಾಡುತ್ತಿದ್ದ ಬಗ್ಗೆ ಟಿವಿ9 ವಾಹಿನಿಯಲ್ಲಿ "ಹೆಣ್ಣಾಗಿದ್ದೇ ತಪ್ಪಾ" ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯ ಸರ್ಕಾರದ ಕಣ್ಣು ತೆರೆಸಿದ್ದು ಮಾತ್ರವಲ್ಲ ಮೌಡ್ಯಗಳಿಂದ ಇದ್ದ ಗೊಲ್ಲರ ಹಟ್ಟಿಗಳಲ್ಲಿ ಜಾಗೃತಿ ಮೂಡಿಸಿ 43 ಗೊಲ್ಲರಹಟ್ಟಿಗಳನ್ನು ಬದಲಿಸಿದ ಮಹತ್ಕಾರ್ಯ ಮಾಡಿದ್ದಾರೆ. ನಂತರ ಟಿವಿ ಕನ್ನಡ ವಾಹಿನಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ರಾಜಕೀಯದ ಒಳ ಹೊರಗೂ ವಿಶ್ಲೇಷಣೆಯ ವರದಿ ಮಾಡಿದ ಕೀರ್ತಿ ಇವರದ್ದು. ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಟಿವಿ ವಾಹಿನಿಯಲ್ಲಿ ನ್ಯೂಸ್ ಆ್ಯಂಕರ್ ಆಗಿ *ಆರ್ ವಿ ಸ್ಪೂಪಿಡ್?* ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಹತ್ತು ಹಲವು ರಾಜ್ಯ ಮಟ್ಟದ ಒಲಿದ ಪ್ರಶಸ್ತಿಗಳು
2023ರಲ್ಲಿ ದಾವಣಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಆಯೋಜಿಸಿದ್ದ 38ನೇ ಪತ್ರಕರ್ತರ ಸಮ್ಮೇಳನದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಮುಡುಗೇರಿತ್ತು.
*ಮಾಧ್ಯಮ ರಂಗದ ಗುರುತರ ಸೇವೆ ಗುರುತಿಸಿ ಈಗ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಒಲಿದು ಬಂದಿದ್ದು ರಾಯಚೂರು ಜಿಲ್ಲೆಗೆ ಮತ್ತಷ್ಟು ಹಿರಿಮೆ ಹೆಚ್ಚಿದಂತಾಗಿದೆ.
ವರದಿ :ಮಲ್ಲಿಕಾರ್ಜುನ ರಾಂಪೂರ.
ಜಿಲ್ಲಾ ವರದಿಗಾರರು.
Tags:
ರಾಯಚೂರು ವರದಿ