ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಆತ್ಮಹತ್ಯಾ ಪ್ರವೃತ್ತಿ ಯುಳ್ಳವರ ಜೊತೆ ಆತ್ಮೀಯತೆಯಿಂದ ಮಾತನಾಡಿದರೆ ಅವರಿಗೆ ಸಾಕಷ್ಟು ಸಮಾಧಾನ ಸಿಗುತ್ತದೆ. ಸೂಕ್ತವಾಗಿ ಸ್ಪಂದಿಸಿದಾಗ ಅವರ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನೇ ತರಬಹುದು. ನೀವು ವೃತ್ತಿಪರ ಸಲಹೆಗಾರರು ಅಥವಾ ಮನೋವೈದ್ಯ ರಲ್ಲದೇ ಇದ್ದರೂ ಸಹ ನಿಮ್ಮ ಮಾತಿ ನಲ್ಲಿ ನಿಜವಾದ ಕಾಳಜಿ, ಸಹಾನು ಭೂತಿ ಹಾಗೂ ಆತ್ಮವಿಶ್ವಾಸ ಇದ್ದರೆ ಆತ್ಮಹತ್ಯೆಗಳನ್ನು ತಡೆಯುವುದು ಖಂಡಿತ ಸಾಧ್ಯವಿದೆ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮನೋವೈದ್ಯ ಡಾ.ಆಫ್ತಾಬ್ ಅಹಮದ್ ಮಾಲ್ದರ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಆತ್ಮಹತ್ಯಾ ತಡೆ ಸಪ್ತಾಹದ ಅಂಗವಾಗಿ ನಗರದ ರೋಟರಿ ಕ್ಲಬ್ ಮಲೆನಾಡು ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಆತ್ಮಹತ್ಯೆ ಎಂಬುದು ಮಾನಸಿಕ ಪಿಡುಗಿನಿಂದ ಸಂಭವಿಸುವ ಕ್ರಿಯೆ, ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದಾಗ ಅದನ್ನು ತಡೆಯುವುದು ಖಂಡಿತ ಸಾಧ್ಯವಿದೆ ಎಂದು ಹೇಳಿದರು.
ಆತ್ಮಹತ್ಯೆಗೆ ಪ್ರಚೋದಿಸಬಹುದಾದ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಅದನ್ನು ತಡೆಯಲು ಸಾಮಾನ್ಯ ಜನರು ಅನುಸರಿಬೇಕಾದ ಸರಳ ನಿಯಮಗಳ ಬಗ್ಗೆ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಮಾನಸಿಕ ಸಮಸ್ಯೆಯಲ್ಲಿ ಸಿಲುಕಿರು ವವ ರೊಡನೆ ಮಾತನಾಡುವಾಗ ನಮ್ಮ ಮಾತುಗಳು ಕೊಂಚವಾದರೂ ಅವರಿಗೆ ಭರವಸೆಯ ಬೆಳಕನ್ನು ಮೂಡಿಸಿದರೆ ಅವರಿಗೆ ಹೊಸ ಬದುಕನ್ನು ಕಟ್ಟಿಕೊಡಬಹುದು. ಅಂತಹ ಭರವಸೆ ಮೂಡಿತೆಂದರೆ, ಮುಂದಿನ ಪರಿಹಾರಗಳಿಗೆ ನುರಿತ ಮನೋವೈದ್ಯರು ಅಥವಾ ತರಬೇತಿ ಹೊಂದಿದ ಆಪ್ತಸಲಹೆಗಾರರ ಸಹಾಯ ಪಡೆದು ಅವರ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಬಹುದು ಎಂದರು.
ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸುವ ಸಲು ವಾಗಿ ಪ್ರತಿ ವರ್ಷ ಸೆ:8 ರಿಂದ 14 ರವರೆಗೆ ರಾಷ್ಟ್ರೀಯ ಆತ್ಮಹತ್ಯೆ ತಡೆ ಸಪ್ತಾಹ ಎಂದು ಆಚರಿಸಲಾಗುತ್ತದೆ. “ಚೇಂಜಿಂಗ್ ದ ನೆರೇಟಿವ್ ಆನ್ ಸುಸೈಡ್” ಎಂಬುದು ಈ ಮಾಸಾಚರಣೆಯ ತ್ರೈವಾರ್ಷಿಕ ಧ್ಯೇಯವಾಗಿದೆ. ಆತ್ಮಹತ್ಯೆ ಎಂಬ ಕಳಂಕ ವನ್ನು ಕಡಿಮೆಗೊಳಿಸುವುದು ಹಾಗೂ ಅದನ್ನು ತಡೆಯಲು ಮುಕ್ತ ಸಂಭಾಷಣೆಯನ್ನು ಪ್ರೋತ್ಸಾಹಿಸು ವುದರ ಕುರಿತು ಜಾಗೃತಿ ಮೂಡಿಸು ವುದೇ ಈ ಧ್ಯೇಯದ ಗುರಿಯಾಗಿದೆ ಎಂದರು.
ಕ್ಲಬ್ ಅಧ್ಯಕ್ಷ ಮುಸ್ತಾಕ್ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಇತ್ತೀಚೆಗೆ ಯುವಜನರಲ್ಲಿ ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯ ಇಲ್ಲದಂತಾಗಿದೆ, ಸಣ್ಣಪುಟ್ಟ ವಿಚಾರಗಳಿಗೆಲ್ಲ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಮನೆಯಲ್ಲಿ ಪೋಷಕರೊಡನೆ, ಹೊರಗೆ ಸ್ನೇಹಿತರೊಡನೆ, ಕೆಲಸದಲ್ಲಿ ಸಹೋದ್ಯೋಗಿಗಳೊಡನೆ ಮುಕ್ತವಾಗಿ ಮಾತನಾಡುವುದರಿಂದ ಹಲವಾರು ಮಾನಸಿಕ ಸಮಸ್ಯೆಗಳನ್ನು ತಡೆಯ ಬಹುದು ಎಂದು ಹೇಳಿದರು.
ಕ್ಲಬ್ ಉಪಾಧ್ಯಕ್ಷೆ ಅಲೇಖ ಎಸ್.ಆರ್, ಮಾಜಿ ಅಧ್ಯಕ್ಷ ಸಿ.ರಾಜು, ವಲಯ ಸೇನಾಧಿಕಾರಿ ಮಂಜುಳಾ ರಾಜು, ಮಾಜಿ ಗವರ್ನರ್,ಹೆಚ್.ಎಲ್. ರವಿ ಹಾಗೂ ಕ್ಲಬ್ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Tags:
ಶಿವಮೊಗ್ಗ ಸುದ್ದಿ