ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಜಿಲ್ಲಾ ವಿಕಲಚೇತನ ಕಲ್ಯಾಣ ಇಲಾಖೆವತಿಯಿಂದ ಶಾಸಕರ ಗೃಹ ಕಛೇರಿಯಲ್ಲಿ ಶ್ರವಣ ಸಾಧನ, ಊರುಕೋಲು, ಅಂಗವಿಕಲ ಗಾಲಿಕುರ್ಚಿ, ಬೈಸಿಕಲ್ ಮತ್ತು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶಾಸಕ ಬಿ.ಕೆ. ಸಂಗಮೇಶ್ವರ್ ವಿತರಿಸಿದರು.
ವಿವಿಧ ಸಲಕರಣೆ ವಿತರಿಸಿ ಮಾತನಾಡಿದ ಶಾಸಕರು, ಸರ್ಕಾರದ ಯೋಜನೆಗಳನ್ನು ಅರ್ಹ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ಯೋಚನೆ ಕಾಂಗ್ರೆಸ್ ಸರ್ಕಾರದ್ದಾಗಿದೆ, ಅಂಗವಿಕಲರು ಸಾಮಾನ್ಯರಂತೆ ಜೀವನ ನಡೆಸಬೇಕೆನ್ನುವ ಯೋಚನೆಯಿಂದ ಸರ್ಕಾರದ ವತಿಯಿಂದ ವಿತರಿಸುತ್ತಿರುವುದಾಗಿ ತಿಳಿಸಿ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ಉದ್ದೇಶದಿಂದ ತಮ್ಮ ಜೀವನ ಸಾಗಿಸಲು ಸ್ವಂತಕಾಲ ಮೇಲೆ ನಿಲ್ಲಬೇಕು ಎಂಬ ಮನೋಭಾವವುಳ್ಳವರಿಗೆ ವಿತರಿಸುವ ಮೂಲಕ ರಾಜ್ಯ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಮತ್ತು ಸರ್ಕಾರಗಳು ಯೋಜನೆಗಳನ್ನು ಅರ್ಹ ಅಂಗವಿಕಲರು, ಹಿಂದುಳಿದವರನ್ನು ಅಯ್ಕೆಮಾಡಿ ವಿತರಣೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಸಹ ಸರ್ಕಾರದವತಿಯಿಂದ ಅರ್ಹರಿಗೆ ಸಹಕರಿಸುತ್ತೇನೆ ಎಂದರು.
ಯಾರಿಗಾದರು ತೊಂದರೆಯುಂಟಾದಲ್ಲಿ ನೇರವಾಗಿ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲು ಶಾಸಕ ಬಿ.ಕೆ. ಸಂಗಮೇಶ್ವರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್, ಮಂಜುನಾಥ್, ಸಯ್ಯದ್ ರೀಯಾಜ್, ಮುಖಂಡರಾದ ಬಿ.ಎಸ್. ಬಸವೇಶ್, ಬಿಎಸ್.ಗಣೇಶ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಕೆ.ಮಹಾದೇವಿ, ಜಿಲ್ಲಾ ವಿಕಲಚೇತನ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್ ಸೇರಿದಂತೆ ಇತರರು ಇದ್ದರು.
Tags:
ಭದ್ರಾವತಿ ವರದಿ