ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ರಬ್ಬರ್ ಕಾಡು ಸಮೀಪದ ಸುಲ್ತಾನ್ ಮಟ್ಟಿಯಲ್ಲಿ ವಿಷ ಸೇವಿಸಿದ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷತನದಿಂದ ಸಾವನ್ನಪ್ಪಿರುವ ಕುರಿತು ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ವಾಮಿನಾಥ್ (55) ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸ ಲಾಗಿತ್ತು. ಆದರೆ,ವಿಷ ಸೇವಿಸಿ ಒದ್ದಾಡುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯ ದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ವಿಫಲರಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಒಂದು ಗಂಟೆ ಆದರೂ ಯಾವುದೇ ಸಿಬ್ಬಂದಿ ಮತ್ತು ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡದ ಪರಿಣಾಮ ರೋಗಿಯ ಜೀವ ಹೋಗಿದೆ.
ವಿಷಸೇವಿಸಿದವರಿಗೆ ವಾಂತಿ ಮಾಡಿಸಲು ಆಸ್ಪತ್ರೆಯಲ್ಲಿ ಉಪ್ಪು ಖಾಲಿ ಆಗಿದ್ದು, ಉಪ್ಪು ಇಲ್ಲದೇ ಸಿಬ್ಬಂದಿಗಳು ಪರದಾಡಿದ್ದಾರೆ. ಉಪ್ಪು ತರಲು ಒಂದು ಗಂಟೆ ವಿಳಂಬ ಮಾಡಿದ್ದಾರೆ. ಅಷ್ಟರಲ್ಲೇ ವಿಷಸೇವಿ ಸಿದ್ದ ವ್ಯಕ್ತಿಯ ಜೀವ ಹೋಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿಗಳು ಇರದ ಹಿನ್ನಲೆಯಲ್ಲಿ ಸ್ವಾಮಿನಾಥ್ ನ ಸಾವಿಗೆ ವೈದ್ಯರು ಮತ್ತು ಜಿಲ್ಲಾಸ್ಪತ್ರೆಯ ಬೇಜವಾಬ್ದಾರಿಯೇ ಕಾರಣವಾಗಿದೆ ಎನ್ನುವುದು ಮೃತನ ಕುಟುಂಬಸ್ಥರ ಆರೋಪವಾಗಿದೆ.
ಇವರ ವಿರುದ್ಧ ಕ್ರಮಕ್ಕೆ ಮೃತನ ಕುಟುಂಬಸ್ಥರು ಮತ್ತು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.