ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಾಡುಕಂಡ ಮುತ್ಸದ್ದಿ, ಹಿಂದುಳಿದ ವರ್ಗಗಳ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ರಾಜ್ಯದ ರೈತರ ಬದುಕಿಗೆ ಬೆಳಕನ್ನು ನೀಡಿದವರು ಎಂದು ಹಿಂದುಳಿದ ವರ್ಗಗಳ ಗ್ರಾಮಾಂತರ ವಿಭಾಗದ ಅಧ್ಯಕ್ಷ ಎಂ.ರಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಎಸ್.ಬಂಗಾರಪ್ಪನವರ 92 ನೇ ಹುಟ್ಟುಹಬ್ಬದ ನಿಮಿತ್ತ ತಾಲ್ಲೂಕಿನ ಹಿರಿಯೂರಿನ ಅಮಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ಹಾಗೂ ಬ್ರೆಡ್ ಗಳನ್ನು ವಿತರಿಸಿ ಮಾತನಾಡಿದರು.
ಕಳದೆ 35 ವರ್ಷಗಳ ಹಿಂದೆಯೇ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 10 ಹೆಚ್.ಪಿ ಪಂಪಸೆಟ್ ಗಳಿಗೆ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದರು. ಇದರಿಂದ ಇವತ್ತು ರಾಜ್ಯದ ಲಕ್ಷಾಂತರ ಬಡ ರೈತ ಕುಟುಂಬಳಿಗೆ ಅನುಕೂಲ ವಾಗಿದೆಯಲ್ಲದೇ ಅವರುಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಜಾರಿಗೆ ತಂದ ಸಂದರ್ಭ ದಲ್ಲಿ ಮುಗು ಮುರಿದವರೇ ಅಂದು ಕೂಡ ಈ ಯೋಜನೆಯನ್ನು ಟೀಕಿಸಿದ್ದರು. ಇಂತಹ ಉಚಿತ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತಿದೆ ಎಂದಿದ್ದರು. ಆದರೆ ಈ ಯೋಜನೆ ಜಾರಿಗೆ ಬಂದು 35 ವರ್ಷಗಳಾದರೂ ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದ ರಮೇಶ್ ರವರು ಆಶ್ರಯ, ಆರಾಧನ, ಅಕ್ಷಯ, ವಿಶ್ವ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದು ಈ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿಗೂ ಸಹಾಯ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶಶಿಕುಮಾರ್, ಮುರುಗೇಶ್, ನಂದೀಶ್ ಕುಮಾರ್ ಹಾಗೂ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳು ಇದ್ದರು.