ದೇಶದ ಮುಂದಿನ ಸವಾಲು ಗಳನ್ನು ಅರ್ಥವ್ಯವಸ್ಥೆಯನ್ನು ಎದುರಿಸುವ ಸಲುವಾಗಿ ಬದಲಾಯಿಸಬೇಕು

ವಿಜಯ ಸಂಘರ್ಷ ವಿಶೇಷ 
1980ರ ದಶಕ ಭಾರತದ ಅರ್ಥವ್ಯವಸ್ಥೆ ಎಲ್ಲಾ ವಲಯಗಳಲ್ಲೂ ಇಳಿಮುಖ ವನ್ನು ಕಾಣುತ್ತಿದ್ದಂತಹ ಸಂದರ್ಭ. ಇಂತಹ ಸಂದರ್ಭದಲ್ಲಿ ಅನೇಕ ಸರ್ಕಾರಗಳು ರಾಜಕೀಯ ಅಸ್ಥಿರತೆಯಿಂದ ಅರ್ಥ ವ್ಯವಸ್ಥೆಯನ್ನು ಮುಗ್ಗಟ್ಟಿನಿಂದ ಪಾರು ಮಾಡಲು ಪ್ರಯತ್ನಿಸುತ್ತಿದ್ದಾದರೂ ಸಾಧ್ಯ ವಾಗದಂತಹ ಸ್ಥಿತಿ.

ದೇಶದ ಚಿನ್ನವನ್ನು ಇತರೆ ರಾಷ್ಟ್ರಗಳ ಬ್ಯಾಂಕುಗಳಲ್ಲಿ ಜಮಾ ಮಾಡಿ ಸಾಲ ಎತ್ತುವ ಸಮಯ, ಪಾವತಿ ಶಿಲ್ಕು ಅಸಮ ತೋಲನ ಅತ್ಯಧಿಕವಾಗಿತ್ತು. ಹಣದುಬ್ಬರ ಗಗನ ಕೇರಿತ್ತು. ದೇಶ ಕೇವಲ ಆಮದುಗಳ ಮೇಲೆ ಮೇಲೆ ಅವಲಂಬಿತವಾಗಿತ್ತು. 

ಇವುಗಳ ನಡುವೆ 1991 ರಲ್ಲಿ ಪಿ.ವಿ. ನರಸಿಂಹರಾವ್ ರವರು ತೆಗೆದುಕೊಂಡಂತಹ ದಿಟ್ಟ ಹೆಜ್ಜೆ ಮನಮೋಹನ್ ಸಿಂಗ್ ರವರನ್ನು ದೇಶದ ಹಣಕಾಸು ಸಚಿವನ್ನಾಗಿ ಮಾಡಿದ್ದು. ಡಾ.ಸಿಂಗ್ ರವರು ಅಧಿಕಾರವನ್ನು ಪಡೆದುಕೊಂಡು ತೆಗೆದುಕೊಂಡಂತಹ ಮೊಟ್ಟ ಮೊದಲನೆಯ ಹೆಜ್ಜೆ ಎಂದರೆ ನೆಹರೂರವರ ಸಾಮಾಜಿಕ ಶಾಹಿ ಅರ್ಥವ್ಯವಸ್ಥೆಯನ್ನು ದೇಶದ ಮುಂದಿನ ಸವಾಲುಗಳನ್ನು ಎದುರಿಸುವ ಸಲುವಾಗಿ ಬದಲಾಯಿಸಬೇಕು ಎಂಬುವುದು. 

ಆರಂಭದಲ್ಲಿ ವಿಘ್ನಗಳು ಉಂಟಾದರೂ ಸಹ ಡಾಕ್ಟರ್ ಸಿಂಗ್ ರವರು ಎಲ್ ಪಿ ಜಿ ಎಂದರೆ ಜಾಗತೀಕರಣ ಸಡಲೀಕರಣ ಮತ್ತು ಖಾಸಗಿಕರಣವನ್ನು ಜಾರಿಗೆ ತಂದರು. ಅರ್ಥಶಾಸ್ತ್ರದಲ್ಲಿ ಯಾವುದೇ ಸುಧಾರಣೆಗಳು ಕಾರ್ಯರೂಪಕ್ಕೆ ಬರಬೇಕಾದರೆ ದೀರ್ಘಾವಧಿಯ ಅವಶ್ಯಕತೆ ಇರುತ್ತದೆ. ಮುಂದಿನ 25 ವರ್ಷಗಳ ಅವಧಿಯ ತೀರ್ಮಾನಗಳನ್ನು ಮುಂದಾಲೋಚನೆ ಮಾಡಿದಂತಹ ಶ್ರೇಷ್ಠ ಆರ್ಥಿಕ ತಜ್ಞ ಡಾಕ್ಟರ್ ಸಿಂಗ್ ರವರು. ಇಂದು ದೇಶದ ಅರ್ಥ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿ ಇರುವುದು ಇವರ ಕೊಡುಗೆ ಸರಿ. 

ಇಂತಹ ಅದ್ಭುತ ಆರ್ಥಿಕ ತಜ್ಞ ರಾಜಕೀಯ ಮುತ್ಸದಿ ಆರ್‌ಬಿಐ ಕಂಡಂತಹ ಅದ್ಭುತ ಗವರ್ನರ್ ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟ ಮತ್ತು ದುಃಖದ ಸಂಗತಿ.

(ಡಾ:ನಾಸೀರ್ ಖಾನ್ 
 ಅರ್ಥಶಾಸ್ತ್ರದ ಪ್ರಾಧ್ಯಾಪಕರು.
ಭದ್ರಾವತಿ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು