ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಲ್ಲಿ ಅ.27 ರಿಂದ ನ.2 ರವರೆಗೆ ಜಾಗೃತಾ ತಿಳುವಳಿಕೆ ಸಪ್ತಾಹ- 2025 ರ ಅಂಗವಾಗಿ "ಜಾಗರೂಕತೆ-ನಮ್ಮೆಲ್ಲರ ಜವಾಬ್ದಾರಿಯಾಗಿದೆ" ಎಂಬ ವಿಷಯದೊಂದಿಗೆ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆ :
ಅ.25ರಂದು ಬೆಳಿಗ್ಗೆ 9.30 ರಿಂದ 11.30 ರವರೆಗೆ ಸ್ಪರ್ಧೆ ವಿಐಎಸ್‌ಎಲ್ ಕ್ರೀಡಾಂಗಣ ದಲ್ಲಿ ನಡೆಯಲಿದೆ. 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಮೊದಲನೇ ವಿಭಾಗದಲ್ಲಿ 5 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ನೈತಿಕ ಮೌಲ್ಯಗಳು ಮತ್ತು ತತ್ವಗಳನ್ನು ಅಭ್ಯಾಸ ಮಾಡುವುದು' ವಿಷಯ ಕುರಿತು ಹಾಗು ಎರಡನೇ ವಿಭಾಗ ದಲ್ಲಿ 8 ರಿಂದ 10 ನೇ ತರಗತಿ ವಿದ್ಯಾರ್ಥಿ ಗಳಿಗೆ `ಭ್ರಷ್ಟಾಚಾರ ತಡೆಗಟ್ಟುವಿಕೆ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಪಾತ್ರಗಳು ಮತ್ತು ಜವಾಬ್ದಾರಿಗಳು' ವಿಷಯ ಕುರಿತು ಸ್ಪರ್ಧೆ ನಡೆಯಲಿದೆ.
ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಬರೆಯುವ ಸ್ಪರ್ಧೆ;
ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ 8 ರಿಂದ 10 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ 'ಭ್ರಷ್ಟಾಚಾರ ತಡೆಗಟ್ಟುವಿಕೆ: ವಿದ್ಯಾರ್ಥಿ ಗಳು, ಶಿಕ್ಷಕರು ಮತ್ತು ಪೋಷಕರ ಪಾತ್ರಗಳು ಮತ್ತು ಜವಾಬ್ದಾರಿಗಳು' ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. ಪ್ರಬಂಧ ಪದಮಿತಿ 1000 ಪದಗಳು ಮೀರಬಾರದು.
ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಸ್ಪರ್ಧೆ;
ಅ.26ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ವಿಐಎಸ್‌ಎಲ್ ಭದ್ರಾ ಅತಿಥಿಗೃಹದಲ್ಲಿ 8 ರಿಂದ 10 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ. 'ಜಾಗೃತಾ ತಿಳುವಳಿಕೆ ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆ: ವಿದ್ಯಾರ್ಥಿಯಾಗಿ ನನ್ನ ಜವಾಬ್ದಾರಿ ಗಳು' ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ. ಭಾಷಣಮಾಡಲು 3 ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದೆ.
ರಸಪ್ರಶ್ನೆ ಸ್ಪರ್ಧೆ;
ಅ.27ರಂದು ಬೆಳಿಗ್ಗೆ 9.30 ಕ್ಕೆ ವಿಐಎಸ್‌ಎಲ್ ಭದ್ರಾ ಅತಿಥಿಗೃಹದಲ್ಲಿ 8 ರಿಂದ 10 ನೇ ತರಗತಿಯ ಶಾಲಾ ವಿದ್ಯಾರ್ಥಿ ಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ಪ್ರತಿ ಶಾಲೆಯಿಂದ ಒಂದು ತಂಡದಲ್ಲಿ ಇಬ್ಬರಿರುವ ಮೂರು ತಂಡಗಳು ಭಾಗವಹಿಸಬಹುದು. ಪ್ರಾಥಮಿಕ ಹಂತದಲ್ಲಿ ಲಿಖಿತ ರಸಪ್ರಶ್ನೆ, ತದನಂತರ ಅಂತಿಮ ಹಂತಕ್ಕೆ 4 ಅಥವಾ 6 ತಂಡಗಳ ಆಯ್ಕೆ ನಡೆಯಲಿದೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಷ್ಟಾಚಾರ ವಿರೋಧಿ ಚಳುವಳಿಗಳು, ಭಷ್ಟಾಚಾರ ವಿರೋಧಿ ಹೋರಾಟದ ಏಜೆನ್ಸಿಗಳು, ಕಾನೂನು ಗಳು ಮತ್ತು ನಿಯಮಗಳು, ಭಾರತದ ಇತಿಹಾಸ, ಸಂವಿಧಾನ ಮತ್ತು ಸಾಧನೆ ಗಳು, ಭಷ್ಟಾಚಾರ ವಿರೋಧಿ ಹೋರಾಟದ ತಂತ್ರಜ್ಞಾನಗಳು, ನೈತಿಕ ಮೌಲ್ಯಗಳು, ಸಾಮಾನ್ಯ ಜಾಗೃತಿಗಳು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಾಮಾನ ಮತ್ತು ಇತ್ಯಾದಿಗಳು ವಿಷಯ ಕುರಿತು ಸ್ಪರ್ಧೆ ನಡೆಯಲಿದೆ.
ಎಲ್ಲಾ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿ ಬರತಕ್ಕದ್ದು, ಜೊತೆಗೆ ಶಾಲಾ ಗುರುತಿನ ಪತ್ರ ತರತಕ್ಕದ್ದು. ಚಿತ್ರಬರೆಯುವ ಮತ್ತು ಪ್ರಬಂಧ ಸ್ಪರ್ಧೆಗಳಿಗೆ ಪ್ರತೀ ಶಾಲೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇರುವುದಿಲ್ಲ. ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷಣ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಪ್ರತಿ ಭಾಷೆಯಲ್ಲಿ ಭಾಗವಹಿಸಲು ಗರಿಷ್ಠ 3 ಸ್ಪರ್ಧಿಗಳನ್ನು ಕಳುಹಿಸತಕ್ಕದ್ದು. ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತೀ ಶಾಲೆಯಿಂದ ಗರಿಷ್ಠ ಒಂದು ತಂಡದಲ್ಲಿ 2 ಸ್ಪರ್ಧಿಗಳಿರುವ 3 ತಂಡಗಳನ್ನು ಕಳುಹಿಸತಕ್ಕದ್ದು. ಮೊಬೈಲ್ 9480829018/ 9480829211 ಸಂಖ್ಯೆಗೆ ಸಂಪರ್ಕಿಸ ಬಹುದಾಗಿದೆ. ಪ್ರತಿ ಸ್ಪರ್ಧೆಯಲ್ಲಿ 3 ಬಹುಮಾನಗಳಿದ್ದು, ಬಹುಮಾನ ವಿತರಣಾ ಸಮಾರಂಭ ನ.3, ಮಧ್ಯಾಹ್ನ 2.30 ಭದ್ರಾ ಅತಿಥಿಗೃಹ ನಡೆಯಲಿದೆ.