ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಸೋಗಾನೆ ಸರ್ಕಾರಿ ಶಾಲೆ ಗೆ ಗೃಹ ಉಪಯೋಗಿ ವಸ್ತುಗಳ ದೇಣಿಗೆ ಸರ್ಕಾರಿ ಶಾಲೆಗಳು ಸರ್ವ ತೋಮುಖ ವಾಗಿ ಅಭಿವೃದ್ಧಿ ಸಂಘ ಸಂಸ್ಥೆ ಗಳ ಸಹಕಾರ ಅಗತ್ಯ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವೀಣಾ ಸುರೇಶ್ ನುಡಿದರು.
ಅವರು ಇಂದು ಸೋಗಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ವಾಗಿ ಬೇಕಾಗಿದ್ದ ಕುಕ್ಕರ್ ಗಳು ಹಾಗೂ ಇಡ್ಲಿ ಪಾತ್ರೆಗಳು ಮತ್ತು ಗೃಹ ಉಪಯೋಗಿ ವಸ್ತುಗಳನ್ನು ಇನ್ನರ್ ವೀಲ್ ಸದಸ್ಯ ಜ್ಯೋತಿ ಬೆನಕಪ್ಪನವರ ಮುಖಾಂತರ ಶಾಲೆಗೆ ನೀಡಿದರು.
ಇದೇ ಸಂದರ್ಭದಲ್ಲಿ ಜ್ಯೋತಿ ಬೆನಕಪ್ಪ ನವರು ಮಾತನಾಡುತ್ತಾ ಸರ್ಕಾರಿ ಶಾಲೆ ಗಳಲ್ಲಿ ಸಾಕಷ್ಟು ಪ್ರತಿಭೆಗಳು ಇರುತ್ತದೆ ಅವರುಗಳಿಗೆ ನಮ್ಮಂತ ಸಂಘ ಸಂಸ್ಥೆ ಗಳಿಂದ ನೆರವು ಸಿಕ್ಕಾಗ ಅವರ ವಿದ್ಯಾಭ್ಯಾಸ ಇನ್ನಷ್ಟು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಯಾಗುತ್ತದೆ ಎಂದರು.
ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಮಾತನಾಡುತ್ತಾ ಇನ್ನರ್ ವೀಲ್ ಕ್ಲಬ್ ವತಿಯಿಂದ ಈ ವರ್ಷ ವಿಡಿ ಸಾಕಷ್ಟು ಸಮುದಾಯ ಸೇವೆ ಗಳನ್ನು ಮನುಕುಲದ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ ಸ್ನೇಹ ಪ್ರೀತಿ ಜೊತೆಗೆ ಸೇವೆಗೆ ಹೆಚ್ಚು ಮಹತ್ವವನ್ನು ನಮ್ಮ ಅಂತರಾಷ್ಟ್ರೀಯ ಇನ್ನರ್ ವೀಲ್ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದರು.
ರಾಜ್ಯ ಸರ್ಕಾರಿ ಸಂಘದ ಉಪಾಧ್ಯಕ್ಷ ರಾದ ಸುಮತಿ ಕುಮಾರಸ್ವಾಮಿ ಮಾತನಾಡಿ ಗ್ರಾಮಾಂತರ ಶಾಲೆಗಳಿಗೆ ಸರ್ಕಾರದ ಸಹಕಾರ ಇದ್ದರೂ ಸಂಘ ಸಂಸ್ಥೆಗಳ ನೆರವು ತುಂಬಾ ಅಗತ್ಯವಾಗಿ ಬೇಕಾಗಿದೆ. ಇಲ್ಲಿ ಸಾಕಷ್ಟು ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿರು ತ್ತಾರೆ ಇಂಥವರಿಗೆ ನೆರವು ಅಗತ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿನೋದ ದಳವೇ ಹಾಗೂ ಇನ್ನರ್ ವೀಲ್ ಕ್ಲಬ್ಬಿನ ನಿರ್ದೇಶಕರು ಪದಾಧಿಕಾರಿಗಳು ಸದಸ್ಯರು,ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
Tags
ಶಿವಮೊಗ್ಗ ರೋಟರಿ ವರದಿ