ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕರೋಟಿ ಗ್ರಾಮ ಸೇರಿದಂತೆ ಸುತ್ತಮುತ್ತ ಗ್ರಾಮದ ರೈತರ ಜಾನುವಾರು ಗಳ ಬಲಿ ಪಡೆದ ಚಿರತೆ ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಲಯ ಅರಣ್ಯ ಇಲಾಖೆಯ ಆವರಣ ದಲ್ಲಿ ಚಿರತೆಯ ದಾಳಿಯಿಂದ ಗಾಯ ಗೊಂಡ ಮೇಕೆ ಇಟ್ಟು ಕರೋಟಿ ಗ್ರಾಮದ ಜನರು ಪ್ರತಿಭಟನೆ ನಡೆಸಿದರು.
ಅಮಾಯಕ ರೈತರ ಜೀವನಾಡಿ ಯಾಗಿರುವ ಜಾನುವಾರುಗಳನ್ನು ನಿತ್ಯವೂ ಒಂದಲ್ಲ ಒಂದು ಜಾನುವಾರು ಚಿರತೆಗೆ ಬಲಿಯಾಗು ತ್ತಿವೆ. ರಾತ್ರಿಯಾದರೆ ಊರೊಳಗೆ ಚಿರತೆಗಳು ಅಡ್ಡಾಡುತ್ತವೆ.ಜೀವ ಭಯದಲ್ಲಿ ದಿನ ನೂಕುತ್ತಿದ್ದರೂ ಯಾವುದೇ ಗಂಭೀರ ಕಾರ್ಯಾಚರಣೆ ನಡೆಸದೆ ಅಮಾಯಕ ಜನರ ಬದುಕಿನ ಜೊತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಕೂಡ ಕರೋಟಿ ಗ್ರಾಮದ ಮಂಜುನಾಥ್ ಎಂಬುವರಿಗೆ ಸೇರಿದ ಸುಮಾರು 15,000 ರೂ, ಬೆಲೆಬಾಳುವ ಮೇಕೆ ಮೇಲೆ ದಾಳಿ ನಡೆಸಿದೆ ಇದರ ಹಿನ್ನೆಲೆ ಕೋಪಗೊಂಡ ಗ್ರಾಮದ ರೈತರು ಹಲವು ಬಾರಿ ಚಿರತೆಯ ಸೆರೆ ಹಿಡಿಯಲು ಮನವಿ ನೀಡಿದರು ಎಚ್ಚೆತ್ತುಕೊಳ್ಳದ ಅರಣ್ಯ ಅಧಿಕಾರಿಗಳ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದು ಆರೋಪಿಸಿ ಚಿರತೆಯಿಂದ ದಾಳಿಗೊಳಗಾದ ಮೇಕೆಯನ್ನು ಇಲಾಖೆಯ ಮಂದಿರಿಸಿ ಪ್ರತಿಭಟನೆ ನಡೆಸಿ ಕೂಡಲೇ ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಇಲಾಖೆ ಯನ್ನೇ ನೇರ ಹೊಣೆ ಮಾಡಲಾಗು ವುದು ಎಂದು ಎಚ್ಚರಿಸಿದರು.
ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ವ್ಯಾಪಕವಾಗಿದೆ. ಚಿರತೆಗಳು ಕಂಡ ತಕ್ಷಣವೇ ಸೆರೆ ಹಿಡಿಯುವ ತುರ್ತು ಕಾರ್ಯಾಚರಣೆ ನಡೆಸದ ಅಧಿಕಾರಿ ಗಳ ಬೇಜವಾಬ್ದಾರಿಯ ಪರಿಣಾಮ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅಹವಾಲು ಆಲಿಸಲು ಆಗಮಿಸಿದ್ದ ವಲಯ ಅರಣ್ಯಾಧಿಕಾರಿ (ಆರ್ ಎಫ್ಓ) ಅನಿತಾ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ, ತುರ್ತು ಸಂದರ್ಭದಲ್ಲೂ ಸಹ ರೈತರು ಕರೆ ಮಾಡಿದ ಸ್ವೀಕರಿಸುವುದಿಲ್ಲ. ನಿಮ್ಮಂತಹ ಬೇಜವಾಬ್ದಾರಿ ಅಧಿಕಾರಿ ಗಳು ಬೇಕಾ ಎಂದು ಅರಣ್ಯ ಅಧಿಕಾರಿ ಅನಿತಾ ವಿರುದ್ಧ ಪ್ರತಿಭಟನಾನಿರತರು ಹರಿಹಾಯ್ದರು.
ಈ ಸಂದರ್ಭದಲ್ಲಿ ರೈತ ಮುಖಂಡ ಕರೋಟಿ ತಮ್ಮಯ್ಯ,ಪುಟ್ಟೇಗೌಡ, ಚಂದ್ರೇಗೌಡ, ಮಂಜುನಾಥ್, ಪಾಪೇಗೌಡ ಸೆರೆದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ