ಭದ್ರಾವತಿ-ತೆರವುಗೊಳಿಸದಿರುವ ಒತ್ತುವರಿ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದಲ್ಲಿ ಕಳೆದ 8 ವರ್ಷ ಗಳಿಂದ ಡಾ.ರಾಜಕುಮಾರ್ ರಸ್ತೆ (ಬಿ.ಎಚ್. ರಸ್ತೆ) ಅಗಲೀಕರಣ ಕಾರ್ಯಕ್ಕೆ ತೊಡಕಾಗಿ ರುವ 9 ಕಟ್ಟಡ ಗಳನ್ನು ಇದುವರೆಗೂ ತೆರವುಗೊಳಿ ಸಿಲ್ಲ. ಇದರಿಂದಾಗಿ ವಾಹನ ಸವಾರ ರಿಗೆ, ಪಾದಚಾರಿಗಳಿಗೆ ತೊಂದರೆ ಯಾಗುತ್ತಿದ್ದು, ಅಲ್ಲದೆ ಭವಿಷ್ಯದ ದೃಷ್ಟಿ ಯಿಂದ ಹಲವು ಅಭಿವೃದ್ಧಿ ಕಾರ್ಯ ಗಳನ್ನು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆ ಯಲ್ಲಿ ತಕ್ಷಣ ಕಟ್ಟಡಗಳನ್ನು ತೆರವು ಗೊಳಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ರವಿಕುಮಾರ್ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 

11.10.2017 ರಂದು ತಾಲ್ಲೂಕು ಕಛೇರಿ ಸಭಾಂಗಾಣದಲ್ಲಿ ನಗರಸಭೆ, ಲೋಕೋಪಯೋಗಿ ಹಾಗು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪದ್ಮ ನಿಲಯ ಹೋಟೇಲ್ ಸೇರಿದಂತೆ ಇತರೆ ಒತ್ತುವರೆಯಾಗಿರುವ 9 ಕಟ್ಟಡಗಳನ್ನು ತೆರವುಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದುವರೆಗೂ ತೆರವಾಗದೆ ಉಳಿದಿದ್ದು ತಕ್ಷಣ ತೆರುವು ಕಾರ್ಯ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪದ್ಮನಿಲಯ ಹೋಟೇಲ್ ಮುಂಭಾಗ ದಲ್ಲಿ ನಿಲುಗಡೆಗೊಳ್ಳುವ ವಾಹನ ಗಳಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ಮತ್ತು ಅದರಲ್ಲೂ ವಿಶೇಷ ವಾಗಿ ಹಿರಿಯ ನಾಗರೀಕರಿಗೆ ಬಹಳಷ್ಟು ತೊಂದರೆಯಾಗು ತ್ತಿದೆ ಎಂದು ಮನವಿ ಯಲ್ಲಿ ಅಳಲು ತೋರ್ಪಡಿಸಿದ್ದಾರೆ. 

ಲೋಕೋಪಯೋಗಿ ಇಲಾಖೆಯಿಂದ ತೆರುವು ಕಾರ್ಯಕ್ಕೆ ದೃಢೀಕೃತವಾಗಿ ರುವ ಪದ್ಮನಿಲಯ ಸೇರಿದಂತೆ 9 ಕಟ್ಟಗಳನ್ನು ತಕ್ಷಣ ತೆರವುಗೊಳಿಸುವ ಮೂಲಕ ಎದುರಾಗಿರುವ ಸಮಸ್ಯೆ ಗಳನ್ನು ಬಗೆ ಹರಿಸುವಂತೆ ಈ ಹಿಂದೆ ತಹಸೀಲ್ದಾರ್ ಸಮ್ಮುಖದಲ್ಲಿ ನಡೆದಿರುವ ಸಭೆ ಹಾಗು ಕೈಗೊಂಡಿ ರುವ ಕ್ರಮಗಳ ಕುರಿತ ದಾಖಲೆ ಗಳ ಸಮೇತ ರವಿಕುಮಾರ್ ಕೋರಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು