ಭದ್ರಾವತಿ-ಸಂವಿಧಾನ ಪ್ರತಿಯೊಬ್ಬ ನಾಗರೀಕರಿಗೂ ಸಮಾನ ಅವಕಾಶ: ಹಕ್ಕುಗಳನ್ನು ನೀಡಿದೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಭಾರತದ ಸಂವಿಧಾನ ಭಾರತೀಯರಾದ ನಮ್ಮೆಲ್ಲರಿಗೂ ಪವಿತ್ರ ವಾದ ಗ್ರಂಥವಾಗಿದ್ದು, ಪ್ರತಿಯೊಬ್ಬ ನಾಗರೀಕರಿಗೂ ಸಂವಿಧಾನವು ಸಮಾನ ಅವಕಾಶ, ಹಕ್ಕುಗಳನ್ನುನೀಡಿದೆ. ಗಣರಾಜ್ಯೋತ್ಸವವೆನ್ನುವುದು ಭಾರತೀಯರಾದ ನಮಗೆ ಪವಿತ್ರವಾದ ರಾಷ್ಟ್ರೀಯ ಹಬ್ಬವಾಗಿದೆ ಎಂದು ತಹಶೀಲ್ದಾರ್ ಪರಸಪ್ಪ ಕುರುಬರ ಹೇಳಿದರು. 

ಅವರು ಸೋಮವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿವಿಧ ರಾಜ್ಯಗಳನ್ನು ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸಿ ರಚಿಸಲಾದ ಭಾರತ ದೇಶದಲ್ಲಿ ಗಣರಾಜ್ಯೋತ್ಸವವನ್ನು ಎಲ್ಲರೂ ಶಾಂತಿ,ಸೌಹಾರ್ಧತೆ,ಪ್ರೀತಿಯೀಂದ ಬಾಳುತ್ತಿದ್ದು ಇದು ವಿಶ್ವಕ್ಕೇ ಮಾದರಿ ಯಾಗಿದೆ ಎಂದರು. 

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೆಶ್ವರ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂದೀಜಿ ಹೆಸರನ್ನೇ ಕೇಂದ್ರಸರ್ಕಾರದವರು ನರೇಗಾದಿಂದ ಗಾಂಧೀ ಹೆಸರನ್ನು ಕೈಬಿಟ್ಟು ಗಾಂಧೀ ಹೆಸರನ್ನು ಇಲ್ಲವಾಗಿಸುವ ಪ್ರಯತ್ನಮಾಡಿದ್ದಾರೆ. ಇತಂಹವರು ಅಧಿಕಾರದಲ್ಲಿ ಮುಂದುವರೆದರೆ ಇವರು ಮುಂದೆ ಸಂವಿಧಾನವನ್ನೇ ಬದಲಾಯಿಸ ಬಹುದು ಆದ್ದರಿಂದ ಎಲ್ಲರೂ ಎಚ್ಚರಿಕೆ ಯಿಂದ ಸಂವಿಧಾನದ ರಕ್ಷಣೆಗೆ ಆಧ್ಯತೆ ನೀಡಬೇಕು ಎಂದರು. 

ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಪ್ರಾಸ್ಥಾವಿಕನುಡಿಗಳನ್ನಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾರಂತ್ ಸಂಗಡಿಗರು ನಾಡಗೀತೆ,ರೈತಗೀತೆ ಹಾಡಿದರು. ಶಾಲಾ ಮಕ್ಕಳು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಭೋಧಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಇತ್ತೀಚೆಗೆ ನಗರದಲ್ಲಿ ನಡೆದ ದಂಪತಿಗಳ ಜೋಡಿ ಕೊಲೆಯನ್ನು 24ಗಂಟೆಯಲ್ಲಿ ಬೇಧಿಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಡಿವೈಎಸ್ಪಿ ಪ್ರಕಾಶ್ ರಾಠೋಡ್, ನಗರ ವೃತ್ತನಿರೀಕ್ಷಕಿ ನಾಗಮ್ಮ ಹಾಗೂ ಹಳೇನಗರ ಪೋಲಿಸ್ ಠಾಣೆಯ ಪಿಎಸ್ ಐ ಸುನೀಲ್ ಬಸವರಾಜ್ ತೇಲಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ವೇದಿಕೆಯಲ್ಲಿ ನಗರಸಭಾಧ್ಯಕ್ಷೆ ಗೀತಾರಾಜಕುಮಾರ್,ಉಪಾಧ್ಯಕ್ಷ ಬಷೀರ್, ಸ್ಥಾಯಿಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್ ಅಹಮದ್, ನಗರಸಬಾ ಸದಸ್ಯರುಗಳು, ಪೌರಾಯುಕ್ತ ಹೇಮಂತ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಆಶಾ, ಗ್ರಾಮಾಂತರ ವೃತ್ತನಿರೀಕ್ಷಕ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು. 

ತಹಶೀಲ್ದಾರ್ ಹಾಗೂ ಶಾಸಕರು ಪೋಲಿಸ್ ತಂಡ,ಗೃಹರಕ್ಷಕದಳ, ಶಾಲಾಮಕ್ಕಳ ವಾದ್ಯತಂಡದ ಧ್ವಜವಂದನೆ ಸ್ವೀಕರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನರ್ತಿಸಿ ರಂಜಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು