ಖಾಸಗೀ ಸರ್ವೆಯರ್ ನಿರ್ಲಕ್ಷ ಸಾರ್ವಜನಿಕರಿಗೆ ತೊಂದರೆ:ಮಾನವ ಹಕ್ಕುಗಳ ಹೋರಾಟ ಸಮಿತಿ ಆರೋಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ರೈತರ ಜಮೀನುಗಳನ್ನು ಸರ್ವೆ ಮಾಡದೆ ನಿರ್ಲಕ್ಷ್ಯವಹಿಸು ತ್ತಿರುವ ಖಾಸಗೀ ಸರ್ವೆಯರ್ ರವರ ನಿರ್ಲಕ್ಷದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಹಾಗೂ ತಾಲ್ಲೂಕು ಕಛೇರಿಯಲ್ಲಿ ಪದೇ ಪದೇ ಲಿಫ್ಟ್ ರಿಪೇರಿ ಆಗುತ್ತಿರುವುದನ್ನು ಖಂಡಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿವತಿ ಯಿಂದ ಪ್ರತಿಭಟನೆ ಹಮ್ಮಿ ಕೊಳ್ಳಲಾಯಿತು.

      ಕೆಲ ತಿಂಗಳುಗಳಿಂದ ಖಾಸಗೀ ಸರ್ವೆಯರ್ಗಳು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೋರಿ ಕೆಲಸಕ್ಕೆ ಹಾಜರಾಗದೆ ಯಾವುದೇ ಜಮೀನನ್ನು ಸರ್ವೆ ಮಾಡದೆ ರೈತರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಇಂದರಿಂದಾಗಿ ಸರ್ವೆ ಮಾಡಿಕೊಡಲು ಕೋರಿ ಅರ್ಜಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ಸರ್ಕಾರ ಕೂಡಲೇ ಇವರುಗಳ ಬೇಡಿಕೆಗಳನ್ನು ಈಡೇರಿಸ ಬೇಕು ಇಲ್ಲವೇ ತಿಂಗಳು ಗಟ್ಟಲೆ ಕೆಲಸಕ್ಕೆ ಹಾಜರಾಗದೆ ಸರ್ವೆ ಮಾಡದೆ ಇರುವ ಖಾಸಗೀ ಸರ್ವೆಯರ್ ರವರನ್ನು ಕೆಲಸದಿಂದ ವಜಾ ಮಾಡ ಬೇಕೆಂದು ಆಗ್ರಹಿಸಿದರು.

     ಕಂದಾಯ ಸಚಿವ ಕೃಷ್ಣಭೈರೇಗೌಡ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳನ್ನು ತಂದಿರುವುದು ಸ್ವಾಗತಾರ್ಹ, ಆದರೆ ಸರ್ವೆ ಇಲಾಖೆಯಲ್ಲಿ ಇರುವ ಭ್ರಷ್ಟಾಚಾರ ಮತ್ತು ನಿರ್ಲಕ್ಷದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ರುವುದು ಅವಶ್ಯಕವಾಗಿದೆ ಎಂದರು.

      ತಾಲ್ಲೂಕು ಕಛೇರಿಯಲ್ಲಿ ಹಲವು ತಿಂಗಳುಗಳಿಂದ ಲೀಫ್ಟ್ ಹಾಳಾಗಿದ್ದು, ಲಿಫ್ಟ್ ನ್ನು ಸರಿಪಡಿಸದೇ ಬೇಜವಾ ಬ್ದಾರಿ ತೋರುತ್ತಿದ್ದು, ಈ ಲೀಪ್ಟ್ ಇಲ್ಲದೇ ಕಚೇರಿಯ ಸಿಬ್ಬಂಧಿಗಳು, ಸಾರ್ವಜನಿಕರು, ವೃದ್ಧರು, ಮಹಡಿ ಯಿಂದ ಮಹಡಿಗೆ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಹಾಗೂ ಸದರಿ ಲಿಫ್ಟ್ ಹಾಳಾದಾಗ ಸಮಯಕ್ಕೆ ಸರಿಯಾಗಿ ದುರಸ್ತಿಯನ್ನು ಸರಿಪಡಿಸದೇ ಆಗಾಗ ಲಿಫ್ಟ್ ಹಾಳಾಗುತ್ತಿರುತ್ತದೆ. ಇದರಿಂದ ಸಾರ್ವಜನಿಕರು ನಿರಂತರವಾಗಿ ತೊಂದರೆ ಅನುಭವಿಸು ವಂತಾಗಿ ರುತ್ತದೆ. ಆದ್ದರಿಂದ ಕೂಡಲೇ ಸರಿಪಡಿಸಲು ಒತ್ತಾಯಿಸಿದರು. 

    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ತೀರ್ತೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು