ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನೌಕರರು ಮತ್ತು ಸಾರ್ವಜನಿ ಕರು ರಕ್ತದಾನ ಮಾಡುವ ಮೂಲಕ ಅನಿವಾರ್ಯ ಇರುವ ಮತ್ತೊರ್ವರ ಸಹಾಯಕ್ಕೆ ಮುಂದಾಗ ಬೇಕು ಎಂದು ಸೈಲ್ -ವಿಐಎಸ್‌ಎಲ್ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ಮನವಿ ತಿಳಿಸಿದರು.
ಅವರು ಬುಧವಾರ ನಗರದ ಸೈಲ್- ವಿಐಎಸ್‌ಎಲ್ ಆಸ್ಪತ್ರೆ ಮತ್ತು ಜೀವ ಸಂಜೀವಿನಿ ಸ್ವಯಂಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜೀವ ಸಂಜೀವಿನಿ ಸ್ವಯಂಸೇವಾ ರಕ್ತ ಕೇಂದ್ರದ ಆಡಳಿತಾಧಿ ಕಾರಿ ರಾಜು ನರಸಯ್ಯ ಮತ್ತು ಡಾ|| ಕೆ.ಎಸ್. ಸುಜೀತ್ ಕುಮಾರ್ ರಕ್ತದಾನ ಶಿಬಿರದ ಮಹತ್ವ ತಿಳಿಸಿ, ಸ್ವಯಂಪ್ರೇರಿತ ರಕ್ತದಾನದ ಮಹತ್ವ ಮತ್ತು ಅಮೂಲ್ಯ ಜೀವಗಳನ್ನು ಉಳಿಸಲು ಕರೆ ನೀಡಿದರು.
ಮಾನವ ಸಂಪನ್ಮೂಲ ಇಲಾಖೆಯ ಮುಖ್ಯ ಮಹಾಪ್ರಬಂಧಕ ಬಿ. ವಿಶ್ವನಾಥ, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಅಮೃತ್ ಕುಮಾರ್, ಪ್ರಭಾರಿ ಮಹಾ ಪ್ರಬಂಧಕ ಟಿ. ರವಿಚಂದ್ರನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಂಚಾರ ಪೋಲೀಸ್ ಇಲಾಖೆಯ ಹೆಡ್ ಕಾನ್ಸ್ ಟಬಲ್ ಹಾಲೇಶ್, ವಿಐಎಸ್‌ಎಲ್ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು, ಮತ್ತು ಸ್ವಯಂಸೇವಕರು ಭಾಗವಹಿಸಿ, ಸ್ವಯಂಪ್ರೇರಿತ ರಕ್ತದಾನದ ಮೂಲಕ ಜೀವಗಳನ್ನು ಉಳಿಸುವ ಉದ್ದೇಶಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.