ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ವಿಐಎಸ್ ಎಲ್ ಮತ್ತು ಎಂಪಿಎಂ ಅವಳಿ ಕಾರ್ಖಾನೆ ಗಳನ್ನು ಅಭಿವೃದ್ಧಿ ಪಡಿಸಲು ಆಗ್ರಹಿಸಿ ಅನ್ನದಾತ ರೈತರ, ಶ್ರಮಜೀವಿ ಕಾರ್ಮಿಕರ ವಿವಿಧ ನಾಗರೀಕರ ಸಮಸ್ಯೆಗಳ ಕುರಿತು ಸೆ: 15 ರಂದು ಜಿಲ್ಲಾಧಿಕಾರಿಗಳ ಕಛೇರಿಯಿಂದ ಬೆಂಗಳೂರಿನ ವಿಧಾನಸೌಧದವರೆಗೂ ನ್ಯಾಯಕ್ಕಾಗಿ ಪ್ರಾದಯಾತ್ರೆ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು.
ಅವರು ಮಂಗಳವಾರ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿ, ದೇಶ ದಲ್ಲಿಯೇ ಪ್ರಸಿದ್ದ ಕಾರ್ಖಾನೆಗಳನ್ನು ಕ್ಷೇತ್ರದಲ್ಲಿ ಸ್ಥಾಪಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ರವರು ದೂರದೃಷ್ಟಿಯಿಂದ ವಿ.ಐ.ಎಸ್.ಎಲ್ ಮತ್ತು ಎಂ ಪಿ ಎಂ ಕಾರ್ಖಾನೆಗಳನ್ನು ನಿರ್ಮಿಸಿ ಕಾರ್ಖಾನೆ ಗಳಿಗೆ ಬೇಕಾಗಿರುವ ಸಾವಿರಾರು ಏಕರೆ ಜಮೀನನ್ನು ಉಚಿತವಾಗಿ ನೀಡಿ ಲಕ್ಕವಳ್ಳಿ ಡ್ಯಾಂ ನಿರ್ಮಿಸಿ ನೀರಿಗೆ ಕೊರತೆಯಾಗದಂತೆ ಮುಂದಿನ ಪೀಳಿಗೆ ಯವರಿಗೆ ಆಶ್ರಯವಾಗಿ ಮತ್ತು ಆಧಾರ ವಾಗಿ ನಿರ್ಮಿಸಿದ ಕಾರ್ಖಾನೆ ಗಳನ್ನು ಸ್ವಾತಂತ್ರದ ನಂತರ ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತ ಮಾಡಿದ ಕೇಂದ್ರ ಮತ್ತು ರಾಜ್ಯಸರ್ಕಾರ ಗಳು ಕಾರ್ಖಾನೆಗಳನ್ನು ಅಭಿವೃದ್ಧಿ ಗೊಳಿಸದೆ ಹಂತ ಹಂತವಾಗಿ ಹಾಳು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಬ್ಬಿಣ, ಉಕ್ಕು ಹಾಗೂ ಸಿಮೆಂಟ್ ತಯಾರಿಸಿ ದೇಶಕ್ಕೆ ಮಾದರಿಯಾಗಿತ್ತು, ಎಂಪಿಎಂ ಕಾರ್ಖಾನೆಯಲ್ಲಿ ಕಾಗದ, ಸಕ್ಕರೆ, ತಯಾರಿ ಸಿದೆ ಸಾವಿರಾರು ಕಾರ್ಮಿಕರಿಗೆ ಬದುಕನ್ನು ನೀಡಿ ಆಸರೆಯಾಗಿತ್ತು, ಇತ್ತೀಚಿನ ವರ್ಷ ಗಳಲ್ಲಿ ಎಲ್ಲಾ ಸರ್ಕಾರಗಳು ಕಾರ್ಖಾನೆ ಗಳನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಪದೇ ಪದೇ ಪ್ರಚಾರಕ್ಕಾಗಿ ಬಳಸಿಕೊಂಡು ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ ವಾಗಿದೆ ಎಂದು ಕಿಡಿ ಕಾರಿದರು.
ಇತ್ತೀಚೆಗೆ ಕೇಂದ್ರ ಉಕ್ಕು ಸಚಿವ ಹೆಚ್.ಡಿ ಕುಮಾರ ಸ್ವಾಮಿ ಕ್ಷೇತ್ರಕ್ಕೆ ಆಗಮಿಸಿ, ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದು, ವರ್ಷಗಳೇ ಕಳೆದಿದ್ದರು ಸಹ ಬಿಡಿಗಾಸನ್ನು ಬಿಡುಗಡೆ ಮಾಡದಿರುವುದನ್ನು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಸಹ ಅವಳಿ ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿ ಸುತ್ತೇವೆ ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂದಿನ ಮುಖ್ಯಮಂತ್ರಿ,ಡಿ.ಕೆ ಶಿವಕುಮಾರ್ ರವರು ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಾರ್ಖಾನೆಯನ್ನು ಪುನರ್ ಸ್ಥಾಪನೆ ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದು ಇಲ್ಲಿಯವರೆಗೂ ಕಾರ್ಖಾನೆಯ ಬಗ್ಗೆ ಕಾಳಜಿ ವಹಿಸದಿರುವುದು ಶೋಷನೀಯ ಸಂಗತಿಯಾಗಿದೆ ಎಂದರು.
ಈ ಹಿನ್ನಲೆಯಲ್ಲಿ ಹೋರಾಟ ಸಮಿತಿಯು ನಿರಂತರವಾಗಿ ಕಾರ್ಖಾನೆ ಗಳ ಅಭಿವೃದ್ಧಿಗೆ ಹಲವು ಕ್ರಾಂತಿಕಾರಿ ಹೋರಾಟಗಳನ್ನು ನಡೆಸಿ ಬಂದಿದ್ದು, ಮತ್ತೊಮ್ಮೆ ವಿಐಎಸ್ ಎಲ್ ಮತ್ತು ಎಂ ಪಿ ಎo ಕಾರ್ಖಾನೆಗಳ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಸೆ: 15 ರಂದು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮದಿನಾಚರಣೆಯ ಪ್ರಯುಕ್ತ ನ್ಯಾಯ ಕ್ಕಾಗಿ ಪಾದಯಾತ್ರೆಯ ಮೂಲಕ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಪಾದಯಾತ್ರೆ ಹೋರಾಟಕ್ಕೆ ಕ್ಷೇತ್ರದ ಎಲ್ಲಾ ನಾಗರೀಕರು, ರೈತರು, ಕೂಲಿ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು, ಬೀದಿ ವ್ಯಾಪಾರಿಗಳು, ವರ್ತಕರು, ಮಹಿಳೆಯರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ.
ಗೋಷ್ಟಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್, ಸಂಚಾಲಕ ಶ್ರೀನಿವಾಸ್, ಏಕಂತಪ್ಪ, ರಾಜು ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.