ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ನಗರದ ವಿಐಎಸ್ಎಲ್ ಮತ್ತು ಎಂ ಪಿ ಎಂ ಕಾರ್ಖಾನೆಗಳನ್ನು ಅಭಿವೃದ್ಧಿ ಗೊಳಿಸುವುದು, ಅ.26 ರಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರವರ ಜನ್ಮದಿನ ಸರ್ಕಾರ ದಿಂದ ಆಚರಿಸು ವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೆ.15 ರ ಮಂಗಳವಾರ ಶಿವಮೊಗ್ಗ ಜಿಲ್ಲಾಧಿ ಕಾರಿ ಕಛೇರಿಯಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಅನ್ನದಾತ ರೈತರ ಶ್ರಮಜೀವಿ ಕಾರ್ಮಿಕರ ಶೋಷಿತ ನಾಗರೀಕರ ವಿವಿಧ ಸಮಸ್ಯೆಗಳ ಖಂಡಿಸಿ, ನಿದಿಗೆ ಪಂಚಾಯಿತಿ ಮಾಚೇನ ಹಳ್ಳಿ ಸರ್ವೇ ನಂ.122 ರಲ್ಲಿ 3 ಎಕರೆ 5 ಗುಂಟೆ ಸರ್ಕಾರದ ಜಾಗದಲ್ಲಿ ನಿವೇಶನ ನೀಡಲು ಒತ್ತಾಯಿಸಿ, ನಗರದಲ್ಲಿ ನೂತನ ವಾಗಿ ನಿರ್ಮಾಣಗೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದ ಊಟದ ಕೊಠಡಿಗಳ ನಿರ್ಮಾಣಕ್ಕೆ 2 ಕೋ.ರೂ. ಅನುದಾನ ಬಿಡುಗೊಳಿಸು ವಂತೆ ಒತ್ತಾಯಿಸಿ ಹಾಗು ಪಿಟಿಸಿಎಲ್ ಕಾಯ್ದೆ ಹಾಗು ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುತ್ತಿರುವ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಕಂದಾಯ ಮತ್ತು ಗ್ರಾಮ ಲೆಕ್ಕಿಗ ಸೇರಿದಂತೆ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕೈಗೊಳ್ಳಲು ಆಗ್ರಹಿಸಿ, ಕಸ್ತೂರಿ ರಂಗನ್ ವರದಿ ಅಧಿಸೂಚನೆ ರದ್ದುಗೊಳಿಸಲು ಆಗ್ರಹಿಸಿ, ಶರಾವತಿ ಸಂತ್ರಸ್ತರಿಗೆ ಸುಮಾರು 65 ವರ್ಷಗಳಿಂದ ನ್ಯಾಯ ನೀಡದ ಕ್ರಮ ಖಂಡಿಸಿ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ಕಾರ್ಮಿಕರು, ರೈತರು, ಶ್ರಮಜೀವಿಗಳು, ವ್ಯಾಪಾರಸ್ಥರು, ವಾಹನ ಚಾಲಕರು- ಮಾಲೀಕರು, ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರು ಪಾದಯಾತ್ರೆಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಯಶಸ್ವಿ ಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮನವಿ ಮಾಡಿದ್ದಾರೆ.