ಶಾಸಕ ಬಿ.ಕೆ.ಸಂಗಮೇಶ್​ರನ್ನು ಆರೋಪ ಮುಕ್ತ ಗೊಳಿಸಿದ ನ್ಯಾಯಾಲಯ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕೊಲೆ ಯತ್ನ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಮತ್ತು ಇತರರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಕರಣದಿಂದ ಮುಕ್ತಗೊಳಿಸಿ ಆದೇಶಿಸಿದೆ.

    ಪ್ರಕರಣದಿಂದ ತಮ್ಮನ್ನು ಆರೋಪ ಮುಕ್ತರನ್ನಾಗಿ ಮಾಡಬೇಕು ಎಂದು ಕೋರಿ ಸಂಗಮೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲ ಯದ ನ್ಯಾಯಾಧೀಶರಾದ ಕೆ.ಬಿ. ಶಿವಪ್ರಸಾದ್‌ ಅವರು ಈ ಆದೇಶ ನೀಡಿದ್ದು, ಪ್ರಕರಣದ ಎಲ್ಲ ಆರೋಪಿ ಗಳನ್ನು ನಿರಪರಾಧಿಗಳು ಎಂದು ಘೋಷಿಸಿದರು.

ರಾಜಕೀಯ ಎದುರಾಳಿಯಾದ ದೂರುದಾರ ಸಿ.ಮಹೇಶ್‌ ಕುಮಾರ್:

    ಉದ್ದೇಶಪೂರ್ವಕವಾಗಿ ಶಾಸಕರ ವಿರುದ್ಧ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಸುಳ್ಳು ಸಾಕ್ಷ್ಯ ನೀಡಲಾಗಿದೆ ಎಂಬ ಆರೋಪಿಗಳ ಪರ ವಕೀಲರ ವಾದಾಂಶವನ್ನು ಎತ್ತಿ ಹಿಡಿದಿರುವ ನ್ಯಾಯಾಧೀಶರು, ಫಿರ್ಯಾದು ದಾರರ ಅಕ್ಕ ಜಯಮ್ಮ ಅವರು ನಂಬಲ ರ್ಹವಾದ ಸಾಕ್ಷ್ಯ ನುಡಿಯಲು ವಿಮುಖ ರಾದ ಕಾರಣ ಯಾವುದೇ ರೀತಿಯ ಪರಿಹಾರಕ್ಕೆ ಅನರ್ಹರು ಎಂದು ತೀರ್ಪಿನಲ್ಲಿ ವಿವರಿಸಿದೆ.

     ಪ್ರಕರಣದ ಹಿನ್ನೆಲೆ: ನಗರದ ಹಳದಮ್ಮ ದೇವಿಯ ಜಾತ್ರೆಯ ಪ್ರಯುಕ್ತ 2010ರ ಮೇ 21ರಂದು ಕುಸ್ತಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಬಿ.ಕೆ.ಸಂಗಮೇಶ್‌ ಹಾಗೂ ಅವರ ಬೆಂಬಲಿಗರು ಕಾರುಗಳಲ್ಲಿ ಬಂದು, ನಮ್ಮ ಮನೆಗೆ ನುಗ್ಗಿ ನಮ್ಮ ಮೇಲೆ ಗಂಭೀರವಾದ ಹಲ್ಲೆ ಮಾಡಿದ್ದರು. ಈ ಸಮಯದಲ್ಲಿ ಬಿಡಿಸಲು ಬಂದ ನನ್ನ ಅಕ್ಕ ಜಯಮ್ಮ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಸಿ.ಮಹೇಶ್‌ ಕುಮಾರ್ ಅವರು ಬಿ.ಕೆ.ಸಂಗಮೇಶ್‌ ಮತ್ತಿತರರ ವಿರುದ್ಧ 2010ರ ಮೇ 22ರಂದು ದೂರು ನೀಡಿದ್ದರು.

    ದೂರಿನ ಅನ್ವಯ ಪೇಪರ್‌ ಟೌನ್‌ ಠಾಣೆಯ ಪೊಲೀಸರು, ಭಾರತೀಯ ದಂಡ ಸಂಹಿತೆ–1860ರ ಕಲಂ 120 (ಬಿ) (ಅಪರಾಧಿಕ ಪಿತೂರಿ), 147 (ಗಲಭೆ), 307 (ಕೊಲೆ ಯತ್ನ) ಮತ್ತು 326ರ (ಅಪಾಯಕಾರಿ ಆಯುಧ ಬಳಸಿ ಗಂಭೀರ ಗಾಯ ಉಂಟು ಮಾಡುವುದು) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು