ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದಿ ನಿವೃತ್ತಿ ನಂತರ ಎಂಪಿಎಂ ಕಾರ್ಖಾನೆಯಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್.ಬಿ.ಪಾಲಾಕ್ಷಿ ರವರ ಅಕ್ರಮವೆಸಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಆರೋಪಿಸಿದರು.
ಅವರು ಬುಧವಾರ ಎಂಪಿಎಂ ಕಾರ್ಖಾನೆ ವ್ಯಾಪ್ತಿಯಲ್ಲಿನ ಮುಖ್ಯ ಅರಣ್ಯ ಕಚೇರಿಗೆ ಮನವಿ ಸಲ್ಲಿಸಿ ಮಾತನಾಡಿ, ಪಾಲಾಕ್ಷಿ ಅವರು ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿ ಯಲ್ಲಿ ಸುಮಾರು 35 ಜನ ವಾಚರ್ ಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸು ತ್ತಿದ್ದು, ಸರ್ಕಾರದಿಂದ ವಾಚರ್ ಗಳಿಗೆ ಮಾಸಿಕ ರೂ.12,000 ಸಾವಿರ ರೂಪಾಯಿ ಗಳು ವೇತನ ನಿಗಧಿಯಾಗಿದ್ದು, ಆದರೆ ಪ್ರತಿ ವಾಚರ್ ಗಳಿಗೆ 8,500/-ಸಾವಿರ ಹಣ ಸಂದಾಯ ಮಾಡುತ್ತಿದ್ದು ಇದಕ್ಕೆ ಸಂಬಂಧ ಪಟ್ಟ ಯಾವುದೇ ದಾಖಲೆ ಗಳಾಗಲೀ ರಶೀದಿಗಳನ್ನಾಗಿ ನೀಡಿರುವುದಿಲ್ಲ ಅಲ್ಲದೆ ದಾಖಲೆ ಗಳನ್ನು ಸಹ ಪಾಲಾಕ್ಷಿರವರು ಇಟ್ಟುಕೊಂಡಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ಇವರ ಕಾರ್ಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಸಿದ್ಧಾಪುರ ಸ.ನಂ : 135/136, ಸಿರಿಯೂರು 12/67, ಕಲ್ಲಗಹಳ್ಳಿ 41/42, ಆಗಲಮನೆ ಗ್ರಾಮದ ಸ.ನಂ : 16/36/35 ರಾಮನಕೊಪ್ಪ 13/14/15 ನಂಜಾಪುರ 27/25 ಸೇರಿದಂತೆ ಹಲವು ಗ್ರಾಮಗಳಲ್ಲಿ ನೀಲಗಿರಿ ಮರಗಳಿರುವ ಪ್ಲಾಂಟೇಷನ್ ಜಾಗದಲ್ಲಿ ನೀಲಗಿರಿ ಮರಗಳ ಸುತ್ತ ಕಳೆ ಮತ್ತು ಗಿಡಗಳನ್ನು ವೀಡಿಂಗ್ (ಕಳೆ ಕೀಳುವುದು) ಮತ್ತು ಪ್ಲಾಗಿಂಗ್ ಮಾಡಲು ಸರ್ಕಾರದ ಇಂತಿಷ್ಟು ಹಣ ನಿಗದಿ ಪಡಿಸಿದ್ದು, ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ರಲ್ಲಿ ಚರ್ಚೆ ಆಗುತ್ತಿದ್ದು, ಈ ವಿಚಾರ ನೈಜವಾಗಿರುತ್ತದೆ.ಆದ್ದರಿಂದ ಇವರ ವಿರುದ್ಧ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಕುರಿತು ವರದಿ ನೀಡುವ ಜೊತೆಗೆ ತಮ್ಮ ಅರಣ್ಯ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ವಾಚರ್ ಗಳ ವಿವರ ಹೆಸರು ಪದನಾಮ ಹಾಗೂ ಕಳೆದ 5 ವರ್ಷ ಗಳಿಂದ ವಾಚರ್ ಗಳಿಗೆ ವೇತನ ಪಾವತಿ ಮಾಡುತ್ತಿರುವ ಬಗ್ಗೆ, ಬ್ಯಾಂಕ್ ಪುಸ್ತಕದ ನಕಲನ್ನು ನೀಡಬೇಕಾಗಿ ಮನವಿ ಮಾಡಿದ್ದಾರೆ.ಅಲ್ಲದೆ ಎನ್.ಬಿ. ಪಾಲಾಕ್ಷಿ ರವರ ವಿರುದ್ಧ ಮೇಲಾಧಿ ಕಾರಿಗಳಿಗೆ ವರದಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಪಟ್ಟ ದಾಖಲೆ ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಛೇರಿಯ ಮುಂಭಾಗದಲ್ಲಿ ವಿವಿಧ ಸಂಘಸಂಸ್ಥೆಗಳ ನೆರವಿ ನೊಂದಿಗೆ ಉಗ್ರಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ರಘು ಸಂಕ್ಲಿಪುರ ಭಾಗವಹಿಸಿದ್ದರು.