ನಿವೃತ್ತ ಜೀವನದಲ್ಲೂ ವಕೀಲಿ ಶಿಕ್ಷಣ ಪಡೆದ ಸಾಧನೆಗಳ ಸರದಾರ ಎನ್.ಕೃಷ್ಣಪ್ಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಾ ಸಂಘಟನಾ ಶಕ್ತಿ ಹೊಂದಿದ್ದ ಎನ್.ಕೃಷ್ಣಪ್ಪ ಅವರು ಸರಕಾರಿ ನೌಕರರ ಸಂಘದಲ್ಲಿ 2002 ರಿಂದ 2021 ರವರೆಗೂ ಒಟ್ಟು ನಾಲ್ಕು ಬಾರಿ ಅಧ್ಯಕ್ಷರಾಗಿದ್ದರು. 

ಇವರು ನಿವೃತ್ತಿ ನಂತರ ಕೃಷಿಕರಾಗಿ ದ್ದರು. ಇಷ್ಟಕ್ಕೆ ತೃಪ್ತಿ ಪಡದ ಅವರು ಶೋಷಿತರಿಗೆ ಅಮಾಯಕರಿಗೆ ಕಿಂಚಿತ್ತಾದರೂ ಸಹಾಯ ಹಸ್ತ ನೀಡಬೇಕೆಂಬ ಛಲ ಹೊತ್ತು ವಕೀಲ ರಾಗಬೇಕೆಂಬ ಹಂಬಲ ಹೊತ್ತು ನಿವೃತ್ತ ಜೀವನದಲ್ಲೂ ವಕೀಲಿ ಶಿಕ್ಷಣ ಪಡೆದು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಬೆಂಗಳೂರಿನ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಪದವಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈಚೆಗೆ ಪರಿಷತ್ ಅಧ್ಯಕ್ಷರಾದ ಆರ್.ರಾಜಣ್ಣ ಮತ್ತಿತರೆ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಕೀರ್ತಿ ತಂದಿದ್ದಾರೆ. 

ಸಮಾಜದ ಕಳಕಳಿ ಹೊಂದಿರುವ ಎನ್.ಕೃಷ್ಣಪ್ಪ ಅವರಿಗೆ ಅವರ ಸ್ನೇಹ ಬಳಗ ಅಭಿನಂದಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು