ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ರಾಜಕೀಯ ಬದುಕು ಕಳಂಕವಿಲ್ಲದ್ದು: ಬಿ.ಕೆ.ಜಗನ್ನಾಥ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರ ರಾಜಕೀಯ ಬದುಕು ಶ್ರೇಷ್ಠ ವಾದದ್ದು, ಕಳಂಕ ವಿಲ್ಲದೆ ವಿಭಿನ್ನವಾಗಿತ್ತು ಎಂದು ಉದ್ಯಮಿ ಬಿ.ಕೆ. ಜಗನಾಥ್ ಹೇಳಿದರು.

ಅವರು ಗುರುವಾರ ನಗರದ ನ್ಯೂಟೌನ್ ನಲ್ಲಿನ ಸುರಕ್ಷಾ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ,ಸಮಾಜವಾದದ ಹರಿಕಾರ ಜೆ.ಹೆಚ್.ಪಟೇಲ್ ರವರ 96ನೇ ಜನ್ಮದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಟೇಲರ ನೆರನುಡಿ ಸಂಸತ್ತಿನಲ್ಲಿ ಕುತೂಹಲ ಮೂಡಿಸಿತ್ತು. ಅವರ ಕನ್ನಡ ಅಭಿಮಾನ ಮಾರ್ದನಿ ಸಿತ್ತು.ಇಂದು ಕನ್ನಡ ಎಲ್ಲೆಡೆ ಮಾಯವಾಗುತ್ತಿರುವುದು ವಿಷಾಧನಿಯ. ಕನ್ನಡ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು. ಬ್ಯಾಂಕ್ ಗಳಲ್ಲಿ ಇತರೆ ಜಿಲ್ಲೆ ಗಳಿಂದ ಆಗಮಿಸುತ್ತಿರುವ ಅಧಿಕಾರಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕಿದೆ. ಅಲ್ಲದೆ ರಾಜ್ಯದಲ್ಲಿ ಅನ್ಯಭಾಷಿಗರ ಆಗಮನ ದಿಂದ ಕನ್ನಡಿಗರಿಗೆ ಉದ್ಯೋಗ ಇಲ್ಕದಂತಾಗಿದೆ. ಇದರ ಉದ್ದೇಶದಿಂದ ಕಾರ್ಮಿಕರ ಸಂಘಟನೆಗಳೊಂದಿಗೆ ಚರ್ಚಿಸು ವುದಾಗಿ ತಿಳಿಸಿದರು.

ಆಶ್ರಮದ ಅಧ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಡಾ:ಜ್ಯೋತಿ ಸೋಮಶೇಖರ್ ಮಾತನಾಡಿ, ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದ ಏಕೈಕ ವ್ಯಕ್ತಿ ಪಟೇಲರಾ ಗಿದ್ದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಹಾಗಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರತಿ ಕನ್ನಡಿಗರು ಮುಂದಾಗಬೇಕಿದೆ ಎಂದರು.

ಕನ್ನಡ ಅಭಿಮಾನ ಶೂನ್ಯರಾಗ ಬಾರದು, ನಿತ್ಯ ಕನ್ನಡಿಗರಾಗಿರಬೇಕು ಎಂದು ಕರೆಕೊಟ್ಟು ನಾಡು ನುಡಿ ಜಲದ ವಿಷಯ ಗಳಲ್ಲಿ ಒಗ್ಗಟ್ಟಾಗಿ ಹೋರಾಡ ಬೇಕೆಂದು ಕರೆ ನೀಡಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಮಾತನಾಡಿ, ಪಟೇಲರು ನೇರ ನುಡಿಯ ವ್ಯಕ್ತಿ ಆಗಿದ್ದರಿಂದ ಉತ್ತಮ ಆಡಳಿತಗಾರ ರಾಗಿದ್ದರು. ಓರ್ವ ವ್ಯಕ್ತಿ ಹೋರಾಟ ದಲ್ಲಿ ಏಕಾಂಗಿಯಾಗಿ ಹೋರಾಟ ರೂಪಿಸಿದರೆ ಅವರಿಗೆ ಬೆನ್ನಲು ಬಾಗಿರಬೇಕು.ಅದೇ ರೀತಿಯಲ್ಲಿ ಇಂದಿನ ಕಾರ್ಯಕ್ರಮದ ಆಯೋಜಕ ಶಶಿಕುಮಾರ್ ಎಸ್ ಗೌಡ ಮಾಡುವ ಹೋರಾಟಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.

ಸಾಮಾಜಿಕ ಹೋರಾಟಗಾರ ಹಾಗೂ ಕಾರ್ಯಕ್ರಮದ ಆಯೋಜಕ ಶಶಿಕುಮಾರ್ ಎಸ್ ಗೌಡ ಪ್ರಾಸ್ತವಿಕ ನುಡಿಗಳನ್ನಾಡಿ, ಕನ್ನಡ ಶಾಲೆಗಳ ಉಳಿವಿಗಾಗಿ ಶಾಸಕರು ಧ್ವನಿ ಎತ್ತಬೇಕಿದೆ ನೂರಾರು ಕನ್ನಡ ಶಾಲೆಗಳು ಅವನತಿ ಹಂಚಿನಲ್ಲಿವೆ. ಇವುಗಳ ಬಗ್ಗೆ ಪ್ರತಿ ಕನ್ನಡಿಗರು ಧ್ವನಿಯಾಗಬೇಕಿದೆ ಎಂದರು.

ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ರಾಷ್ಟ್ರೀಯ ಸಂಸ್ಥಾಪಕ ಡಿ.ಜೆ.ಪ್ರಭು, ಸಾಮಾಜಿಕ ಕಾರ್ಯಕರ್ತ ಮೋಸಸ್ ರೋಷಯ್ಯ ಮಾತನಾಡಿದರು. 

ಸತೀಶ್,ನಿವೃತ್ತ ಶಿರಸ್ತೇದಾರ ರಂಗನಾಥ್, ದಿವ್ಯಶ್ರೀ ಶಶಿಕುಮಾರ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು