ವಿದ್ಯಾರ್ಥಿಗಳ ಸಾಧನೆಗೆ ಹಿಂದೆ ಗುರು ಮುಂದೆ ಗುರಿ ಇರಬೇಕು: ಡಾ.ಕೆ.ನಾಗರಾಜ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಿದ್ಯಾರ್ಥಿಗಳು ಸಾಧನೆಗಾಗಿ ಆಶಯದ ಜೊತೆಗೆ ಕಠಿಣ ಪರಿಶ್ರಮ ಪಡಬೇಕು ಹಾಗೂ ಹಿಂದೆ ಗುರು ಮುಂದೆ ಗುರಿ ಇರಬೇಕು" ಎಂದು ಅನನ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ನಾಗರಾಜ್ ತಿಳಿಸಿದರು.

ಅವರು ಶನಿವಾರ ನಗರದ ಅಪ್ಪರ್ ಹುತ್ತಾ ಅನನ್ಯ ಶಿಕ್ಷಣ ಸಂಸ್ಥೆ "ಅನನ್ಯ ಕೀಡೋತ್ಸವ" ದ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದರು.

ಶಾಲೆಯ 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಏರೋಬಿಕ್ಸ್, ಕರಾಟೆ. ಡ್ರಿಲ್ ಡ್ಯಾನ್ಸ್, ಫ್ಲಾಗ್ ಡ್ಯಾನ್ಸ್, ಗ್ರೀನ್ ಥೀಮ್ ಡ್ಯಾನ್ಸ್, ಬ್ಯಾಂಬೂ ಡ್ಯಾನ್ಸ್ ಹಾಗೂ ಪ್ರೀಪ್ರೈಮರಿ ತಂಡದಿಂದ ಪಿಂಗ್ ಪಾಂಗ್ ಡ್ಯಾನ್ಸ್, ಕ್ಲಾಪ್ ಡ್ಯಾನ್ಸ್ ಸೇರಿದಂತೆ ವಿವಿಧ ನೃತ್ಯಗಳನ್ನು ಪ್ರದರ್ಶಿಸಿ "ಅನನ್ಯ ಕೀಡೋತ್ಸವ"ವು ವೈಭವದಿಂದ ಜರುಗಿತು.

ಕೀಡೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಆಗಮಿಸಿದ್ದು, ಪೋಷಕರಿ ಗಾಗಿ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ವಿವಿಧ ಆಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಹರೀಶ್ ಕುಮಾರ್ ಕೆ.ಪಿ.ಹಾಗೂ ಗಿರಿರಾಜ್ ಕೆ.ವಿ.ಸಹ ಕಾರ್ಯದರ್ಶಿ ಗಳಾದ ಭರತ್ ಕುಮಾರ್ ನವೀನ್ ಕುಮಾರ್ ಜಿ.ವಿ, ಶಾಲಾ ಆಡಳಿತಾಧಿ ಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.

ಕಲ್ಲೇಶ್ ಕುಮಾರ್ ಕೆ ಸ್ವಾಗತಿಸಿ, ಮಮತ ಕ್ರಿಸ್ಟೀ, ಲತಾ ಟಿ ನಿರೂಪಿಸಿದರು.ಸುನಿತಾ ಅತಿಥಿಗಳ ಪರಿಚಯಿಸಿದರೆ, ಕುಮಾರ್ ವಾರ್ಷಿಕ ಕ್ರೀಡಾ ವರದಿಯನ್ನು ಓದಿದರು. ತನುಜಾ ಅನಿಲ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು