ಯಾವುದೇ ಶೀರ್ಷಿಕೆಯಿಲ್ಲ

 ವಿಜಯ ಸಂಘರ್ಷ



ಭದ್ರಾವತಿ: ಕಾಗದ ನಗರದ ವಾರ್ಡ್ ನಂಬರ್ 19 ರ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿಂದು ಶಾಸಕ  ಬಿ.ಕೆ.ಸಂಗಮೇಶ್ವರ್ ವಾರ್ಡಿನ ಬಡ ಕುಟುಂಬಗಳಿಗೆ ನಗರಸಭೆಯಿಂದ ನೀಡಲಾಗುವ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು ಕೋವಿಡ್ ನಿಂದ ಜನರ ಜೀವನ ತತ್ತರಿಸಿದೆ. ಇದಕ್ಕೆ ಪೂರಕವಾಗಿ  ನಗರಸಭಾ ವ್ಯಾಪ್ತಿಯ ಬಡಕುಟುಂಬ ಫಲಾನುಭವಿಗಳಿಗೆ ಆಹಾರ ಕಿಟ್ ನೀಡುವ ಯೋಜನೆ ರೂಪಿಸಲಾಗಿದೆ.



ಕಳೆದ ಸಂದರ್ಭದಲ್ಲಿ ತಾವು 70 ಸಾವಿರ ಕುಟುಂಬಗಳಿಗೆ ವಿತರಣೆ ಮಾಡಲಾಗಿತ್ತು. ಈ ಭಾರಿ ಜಿಲ್ಲಾಧಿಕಾರಿಗಳಿಗೆ ಒಂದು ಕೋಟಿ ರೂ ವಿಶೇಷ ಅನುದಾನ ನೀಡುವಂತೆ ಕೋರಲಾಗಿತ್ತು. ಈ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಬಡವರಿಗೆ ಕಿಟ್ ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಅರೋಗ್ಯದ ಕಡೆ ಗಮನ ಹರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡಿದರು.



ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಸವರಾಜ್ ಬಿ. ಅನೆಕೊಪ್ಪ, ಕೆ.ಸುದೀಪ್ ಕುಮಾರ್  ಪೌರಾಯುಕ್ತ ಪರಮೇಶ್ವರ್,  ಮುಖಂಡರಾದ ಉಜ್ಜಿನಿಪುರ ವೆಂಕಟೇಶ್, ಅರುಣ್, ಬಾಲಾಜಿ,  ಜಿನ್ನಿ, ತಿಮ್ಮಪ್ಪ, ಕಮಲಾಕರ್, ಸೇರಿದಂತೆ  ಸ್ಥಳೀಯ ಮುಖಂಡರು ಇದ್ದರು.

ನಂತರ ವಾರ್ಡ್ ಸಂಖ್ಯೆ 21, 22 ಹಾಗೂ 23 ನೇ ವಾರ್ಡ್ ಗಳ ಬಿಪಿಎಲ್ ಪಡಿತರ ಚೀಟಿಹೊಂದಿರುವವರಿಗೆ ವಿತರಿಸಲಾಯಿತು.

ವಿಜಯ ಸಂಘರ್ಷಕ್ಕೆ ಸುದ್ದಿ 
ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು