ವಿಜಯ ಸಂಘರ್ಷ / ಕೊರಟಗೆರೆ
ತಾಲೂಕಿನ ಚೆನ್ನರಾಯನದುರ್ಗ ಹೋಬಳಿಯ ಸಿದ್ದರ ತಪೋಭೂಮಿ, ಸಂಜೀವಿನಿ ತಾಣವಾದ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಡಾ.ಜಿ ಪರಮೇಶ್ವರ್ ರವರಿಂದ ದೇವಾಲಯಗಳ ಅರ್ಚಕರಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ಆಹಾರಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
ಮಧುಗಿರಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವಂತಹ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ಸುಮಾರು 150ಕ್ಕೂ ಹೆಚ್ಚು ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಡಾ.ಜಿ ಪರಮೇಶ್ವರ್ ರವರು ಮಾತನಾಡಿ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಒಳಪಡುವ ಸಿ ದರ್ಜೆಯ ದೇವಾಲಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರಿಗೆ ಮತ್ತು ಸಿಬ್ಬಂದಿಗಳಿಗೆ ಅನ್ನ ದಾಸೋಹ ನಡೆಸುವ ಎ ಮತ್ತು ಬಿ ದರ್ಜೆಯ ದೇವಾಲಯಗಳಲ್ಲಿ ಲಭ್ಯವಿರುವ ಅಕ್ಕಿ ಮತ್ತು ಇತರೆ ದವಸ ಧಾನ್ಯಗಳನ್ನು ಆಹಾರದ ಕಿಟ್ ಗಳ ರೂಪದಲ್ಲಿ ತಯಾರಿಸಿ ನೀಡಲಾಗುತ್ತಿದೆ ಹಾಗೂ ಉಳಿಕೆ ಆಹಾರ ಧಾನ್ಯಗಳನ್ನು ಕಷ್ಟದಲ್ಲಿರುವಂತಹ ಸಾರ್ವಜನಿಕರಿಗೆ ಆಹಾರದ ಕಿಟ್ ನೀಡಲಾಗುತ್ತದೆ. ಹಾಗೂ ಆಹಾರ ಧಾನ್ಯಗಳು ಲಭ್ಯವಿಲ್ಲದಿದ್ದಲ್ಲಿ ಸಿ ದರ್ಜೆಯ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಮಾತ್ರ ದೇವಾಲಯದ ನಿಧಿಯಿಂದ ವೆಚ್ಚವನ್ನು ಭರಿಸಿ ಆಹಾರದ ಕಿಟ್ ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಮಧುಗಿರಿ ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳ ರವರು ಅರ್ಚಕರ ಮತ್ತು ಸಿಬ್ಬಂದಿಗಳ ಅರೋಗ್ಯ ಸ್ಥಿತಿ ಗತಿಗಳನ್ನು ವಿಚಾರಿಸಿ ಎಲ್ಲರೂ ಲಸೀಕೆ ಯನ್ನು ಪಡೆಯಬೇಕೆಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ,ತಾಲೂಕು ದಂಡಾಧಿಕಾರಿಗಳಾದ ಗೋವಿಂದರಾಜು, ಇಓ ಶಿವಪ್ರಕಾಶ್,ಕಲಾವಿದ ಕಂಬದ ರಂಗಯ್ಯ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಗೊಂದಿಹಳ್ಳಿ ರಂಗರಾಜು, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೋದ, ಉಪಾಧ್ಯಕ್ಷ ಅಖಂಡರಾಧ್ಯ, ಪಿಡಿಓ ವಿಜಯಕುಮಾರಿ, ವಿಎ ಕಲ್ಪನಾ, ಎಫ್ ಡಿ ಎ ಸೌಭಾಗ್ಯಮ್ಮ ಇತರೇ ಅಧಿಕಾರಿಗಳು ಹಾಜರಿದ್ದರು.
ವರದಿ :
ಮಂಜುಸ್ವಾಮಿ.ಎಂ.ಎನ್ ವರದಿಗಾರರು. ಕೊರಟಗೆರೆ