ವಿಜಯ ಸಂಘರ್ಷ
ಶಿವಮೊಗ್ಗ: ಲಾಕ್ ಡೌನ್ ಅವಧಿ ಮುಗಿದು ಅನ್ ಲಾಕ್ ಡೌನ್ ಆರಂಭಗೊಂಡಿದೆ. ಅದೇ ಬೆನ್ನಲ್ಲಿ ಇಂದಿನಿಂದ ಕೆಎಸ್ ಆರ್ ಟಿ ಸಿ ಬಸ್ ಗಳು ಇತರೆ ಜಿಲ್ಲೆಗಳಲ್ಲಿ ಸಂಚರಿ ಸಲಿದ್ದು, ಜಿಲ್ಲೆಯಲ್ಲಿಯೂ ಬಸ್ ಗಳು ಓಡಾಡಲಿದೆ.
ರಾಜ್ಯದಲ್ಲಿ ಮೈಸೂರು ಜಿಲ್ಲೆ ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಶೇ.50 ರಷ್ಟು ಪ್ರಯಾಣಿಕರನ್ನ ತುಂಬಿಸಿ ಕೊಂಡು ಬಸ್ ಗಳು ರಸ್ತೆಗಿಳಿ ಯಲಿವೆ. ಅದರಂತೆ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಹೊರಡಲಿದೆ.
ಶಿವಮೊಗ್ಗ-ಹುಬ್ಬಳ್ಳಿ, ಶಿವಮೊಗ್ಗ-ದಾವಣಗೆರೆ, ಶಿವಮೊಗ್ಗ-ಚಿಕ್ಕಮಗಳೂರು, ಶಿವಮೊಗ್ಗ-ಹಾವೇರಿ ಮತ್ತು ಶಿವಮೊಗ್ಗ-ಹಾಸನ, ಶಿವಮೊಗ್ಗ-ಬೆಂಗಳೂರು ಹೀಗೆ ರಾಷ್ಟ್ರೀಯ ಪರ್ಮಿಟ್ ಗಳಲ್ಲಿ ಕಡೆ ಸಂಚರಿಸಲಿದೆ.
ಶಿವಮೊಗ್ಗ-ಮಂಗಳೂರು, ಶಿವಮೊಗ್ಗ-ಉಡುಪಿ, ಶಿವಮೊಗ್ಗ-ಕಲ್ಬುರ್ಗಿ, ಶಿವಮೊಗ್ಗ-ವಿಜಯಾಪುರ, ಶಿವಮೊಗ್ಗ-ಬೆಳಗಾವಿ, ಶಿವಮೊಗ್ಗ-ಮೈಸೂರು, ಶಿವಮೊಗ್ಗ-ಹೈದ್ರಾಬಾದ್, ಶಿವಮೊಗ್ಗ-ಚೆನ್ಬೈ ಸೇರಿದಂತೆ ಇನ್ನೂ ಹಲವೆಡೆ ಬಸ್ ಗಳ ಸಂಚಾರ ಅನುಮಾನವೆಂದು ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ-ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣ ಕಚೇರಿ ವ್ಯಾಪ್ತಿಯಲ್ಲಿರುವ ನಾಲ್ಕು ಡಿಪೋಗಳಿಂದ ಸುಮಾರು 120 ಬಸ್ ಗಳು ಸಂಚರಿಸಲಿವೆ.
ಖಾಸಗಿ ಬಸ್ ಸಂಚಾರವಿಲ್ಲ:
ಖಾಸಗಿ ಬಸ್ ಗಳ ಸಂಚಾರವಿರುವುದಿಲ್ಲ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅನ್ ಲಾಕ್ ಸಭೆಯಲ್ಲಿ ಖಾಸಗಿ ಬಸ್ ಮಾಲೀಕರು ಹಾಜರಾಗಿರಲಿಲ್ಲ. ಸ್ಟೇಜ್ ಕ್ಯಾರೇಜ್ ಬಸ್ ಗಳು ಜಿಲ್ಲೆಯಲ್ಲಿ 600 ಬಸ್ ಗಳಿವೆ. 600 ಬಸ್ ಗಳು ಮತ್ತು ಸಿಟಿ ಬಸ್ ಸರ್ವಿಸ್ ಗಳು ರಸ್ತೆಗಳಿಯು ವುದು ಸಧ್ಯಕ್ಲಿಲ್ಲವೆಂದು ಖಾಸಗಿ ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಸುದ್ದಿ ಮಾಹಿತಿಗಾಗಿ ಸಂಪರ್ಕಿಸಿ
+91 9743225795