ಹೊಸಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ : ಸಾಂಸ್ಕೃತಿಕ ವೇದಿಕೆಯ ಒತ್ತಾಯ

 


ವಿಜಯ ಸಂಘರ್ಷ

ಭದ್ರಾವತಿ :ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡದ ಕಡೆಗಣನೆ ಸಲ್ಲದು, ಎಲ್ಲಾ ಹಂತದಲ್ಲಿ ಕನ್ನಡಕ್ಕೆ ಆದ್ಯತೆ ದೊರೆಯುವಂತೆ ಗಮನಹರಿ ಸಲು ಒತ್ತಾಯಿಸಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಕನ್ನಡಕ್ಕೆ ಸೂಕ್ತ ಸ್ಥಾನ ಮಾನ ಕಲ್ಪಿಸಿ ಜಾರಿಗೂ ಮುನ್ನ ಸಮಗ್ರ ಚಿಂತನೆ ಯೊಂದಿಗೆ ಕನ್ನಡಕ್ಕೆ ಅನ್ಯಾಯ ವಾಗದಂತೆ  ಜಾರಿಗೊಳಿಸಬೇಕು. ಪ್ರಾಥಮಿಕ, ಪ್ರೌಢ, ಪಿ.ಯು, ಕಾಲೇಜು ಮಟ್ಟದ ಉನ್ನತ ಶಿಕ್ಷಣದ ಜ್ಞಾನ ಶಾಖೆಯು ಕನ್ನಡ ಭಾಷೆಯ ಶಿಕ್ಷಣಕ್ಕೆ ಆಧ್ಯತೆ ನೀಡುವುದು. ವಿಜ್ಞಾನ, ಕಾಮರ್ಸ್, ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಎಲ್ಲಾ ವಿಭಾಗಳಲ್ಲೂ ಅನ್ಯಾಯ ವಾಗಬಾರದು ಎಂದು ಉಪ ಮುಖ್ಯ ಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ ರವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ವೇದಿಕೆಯ ಪದಾಧಿಕಾರಿಗಳಾದ ಕೋಗಲೂರು ತಿಪ್ಪೇಸ್ವಾಮಿ, ಎಂ.ಎಸ್.  ಸುಧಾಮಣಿ, ಭದ್ರಾವತಿ ಗುರು, ಪೀಟರ್, ಎಂ.ಈ.ಜಗದೀಶ್, ಎಚ್.ತಿಮ್ಮಪ್ಪ , ಸಿದ್ದೋಜಿರಾವ್, ಹಿರಿಯೂರು ಪ್ರಸನ್ನ, ಕೋಡ್ಲು ಯಜ್ಞಯ್ಯ, ಕಮಲಾಕರ್ ಇನ್ನಿತರರು ಭಾಗವಹಿಸಿದ್ದರು.

ವಿಜಯ ಸಂಘರ್ಷ ಕ್ಕೆ  ಸುದ್ದಿ 
ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು